×
Ad

ಕಿಂ ಜಾಂಗ್ ಈ ವರ್ಷ ಗಲ್ಲಿಗೇರಿಸಿದ್ದು ಎಷ್ಟು ಮಂದಿಯನ್ನು ಗೊತ್ತೇ ?

Update: 2016-10-22 15:27 IST

ಸೋಲ್,ಅಕ್ಟೋಬರ್ 22: ಉತ್ತರ ಕೊರಿಯದ ಸರ್ವಾಧಿಕಾರಿ ಕಿಂ ಜಾಂಗ್ ಉನ್ ಈವರ್ಷ ಇದುವರೆಗೆ 64 ಮಂದಿಗೆ ದೇಶದ್ರೋಹ ಆರೋಪದಲ್ಲಿ ಗಲ್ಲಿಗೇರುವಂತೆ ಮಾಡಿದ್ದಾರೆಂದು ವರದಿಯೊಂದು ತಿಳಿಸಿದೆ. ದಕ್ಷಿಣ ಕೊರಿಯದ ಬೇಹುಗಾರ ಸಂಘಟನೆ ಈ ಕುರಿತು ಮಾಹಿತಿಯನ್ನು ಬಹಿರಂಗಪಡಿಸಿದ್ದು ಈ ವರ್ಷ ಗಲ್ಲಗೇರಿದವರ ಸಂಖ್ಯೆ ದುಪ್ಪಟ್ಟಾಗಿದೆ ಎಂದಿದೆ. 2011ರಲ್ಲಿ ಅಧಿಕಾರಕ್ಕೆ ಬಂದ ಕಿಂ ಜಾಂಗ್ ಉನ್ ಈವರೆಗೆ ನೂರಕ್ಕೂ ಹೆಚ್ಚು ಮಂದಿಗೆ ಗಲ್ಲುಶಿಕ್ಷೆಯನ್ನುಜಾರಿಗೊಳಿಸಿದ್ದಾರೆ ಎನ್ನಲಾಗಿದೆ.

2013ರಲ್ಲಿ ತನ್ನ ಮಾವನ ಚಾಂಗ್ ಸೋಂಗ್ ತೈಯನ್ನುದೇಶದ್ರೋಹ ಆರೋಪ ಹೊರಿಸಿ ಗಲ್ಲಿಗೇರಿಸುವುದರೊಂದಿಗೆ ಕಿಂ ಜಾಂಗ್ ಉನ್‌ರ ಕ್ರೌರ್ಯ ಹೊರಜಗತ್ತಿಗೆ ಬಹಿರಂಗವಾಗಿತ್ತು. ಹಸಿದ 120 ಬೇಟೆನಾಯಿಗಳನ್ನು ಕಬ್ಬಿಣದ ಗೂಡಿನೊಳಗೆ ಇರಿಸಿ ಅದರೊಳಕ್ಕೆ ತೈಯವರನ್ನು ನಗ್ನಗೊಳಿಸಿ ಎಸೆದು ಕೊಲ್ಲಲಾಗಿತ್ತು. ನಾಯಿಗಳು ಅವರನ್ನು ಕಚ್ಚಿ ಸಾಯಿಸುತ್ತಿರುವ ದೃಶ್ಯವನ್ನು ನೂರಾರು ಮಂದಿ ನೋಡುತ್ತಾ ನಿಂತಿದ್ದರು. 2015ರಲ್ಲಿ ರಕ್ಷಣಾ ಸಚಿವರಾಗಿದ್ದ ಹ್ಯೂನ್ ಯಾಂಗ್ ಚೊಲಿಯವರನ್ನು ಉನ್ ಭಾಗವಹಿಸಿದ್ದ ಒಂದು ಕಾರ್ಯಕ್ರಮದಲ್ಲಿ ನಿದ್ರಿಸಿದ್ದಾರೆಂದು ಆರೋಪಿಸಿ ಕೊಲ್ಲಲಾಯಿತು. ಯುದ್ಧ ವಿಮಾನಗಳನ್ನು ಗುಂಡುಹಾರಿಸುವ ಸಾಮರ್ಥ್ಯವಿರುವ ರಷ್ಯನ್ ನಿಮಿತ ಝೆಡ್‌ಪಿ-4 ಮಿಶಿನ್‌ಗನ್ ಬಳಸಿ ಚೋಲಿಯವರನ್ನು ಕೊಲ್ಲಲಾಗಿತ್ತು. 2013ರಲ್ಲಿ ಎಂಬತ್ತು ಮಂದಿಗೆ ಗಲ್ಲುಶಿಕ್ಷೆಯನ್ನು ಶಿಂಗ್‌ಪುಂಗ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಜಾರಿಗೆ ತರಲಾಗಿತ್ತು. ಇದನ್ನು ನೋಡಲು ಮಹಿಳೆಯರು ಮಕ್ಕಳ ಸಹಿತ 10,000 ಮಂದಿ ಸ್ಟೇಡಿಯಂಗೆ ಬಂದಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News