ವೈದ್ಯರ ನಿವೃತ್ತಿ ವಯಸ್ಸು 67ಕ್ಕೆ ಹೆಚ್ಚಳ: ಎಐಐಎಂಎಸ್ ಪ್ರಸ್ತಾವನೆ

Update: 2016-10-22 13:22 GMT

ಹೊಸದಿಲ್ಲಿ, ಅ.22: ತನ್ನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ನಿವೃತ್ತಿ ವಯಸ್ಸನ್ನು 65ರಿಂದ 67ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ (ಎಐಐಎಂಎಸ್)ಯ ಆಡಳಿತ ವರ್ಗ ಅನುಮೋದನೆ ನೀಡಿದೆ.ಕೇಂದ್ರ ಸರಕಾರ ಒಪ್ಪಿಗೆ ನೀಡಿದರೆ ಈ ಪ್ರಸ್ತಾವನೆ ಅನುಷ್ಠಾನಕ್ಕೆ ಬರಲಿದೆ.

 ತಜ್ಞ ವೈದ್ಯರ ತೀವ್ರ ಕೊರತೆಯನ್ನು ಮನಗಂಡು ಈ ಪ್ರಸ್ತಾವನೆ ಸಲ್ಲಿಸಲಾಗಿದೆ. 65 ವರ್ಷಕ್ಕೆ ನಿವೃತ್ತರಾಗುವ ಬಹುತೇಕ ವೈದ್ಯರು ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಮುಂದುವರಿಸುತ್ತಾರೆ. ಸಂಸ್ಥೆಯ ಆಸ್ತಿಯಾಗಿರುವ ಈ ಅನುಭವಿ ವೈದ್ಯರ ಸೇವೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ದೊರಕಬೇಕಿದೆ ಎಂದು ಎಐಐಎಂಎಸ್ ನಿರ್ದೇಶಕ ಡಾ. ಎಂ.ಸಿ.ಮಿಶ್ರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News