ಇಸ್ಲಾಂ ಧರ್ಮದ ಬಗ್ಗೆ ತಿಳುವಳಿಕೆ ಅಗತ್ಯ: ಆಲಿಕುಂಞಿ ಉಸ್ತಾದ್

Update: 2016-10-22 15:00 GMT

ಮಂಗಳೂರು, ಅ. 22: ಇಸ್ಲಾಂ ಧರ್ಮದ ಬಗ್ಗೆ ತಿಳುವಳಿಕೆ ಅಗತ್ಯವಾಗಿದ್ದು, ಧಾರ್ಮಿಕ ಶಿಕ್ಷಣದಿಂದ ಮಾತ್ರ ಇದು ಸಾಧ್ಯವಿದೆ ಎಂದು ಸಮಸ್ತ ಕೇರಳ ಜಂಇಯತುಲ್ ಉಲಮಾದ ಉಪಾಧ್ಯಕ್ಷ ತಾಜುಶರೀಅಃ ಖಾಝಿ ಶೈಖುನಾ ಆಲಿಕುಂಞಿ ಉಸ್ತಾದ್ ಹೇಳಿದರು.

ಅವರು ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಇದರ ಆಶ್ರಯದಲ್ಲಿ ಶನಿವಾರ ತೊಕ್ಕೊಟ್ಟು ಯುನಿಟಿ ಹಾಲ್‌ನಲ್ಲಿ ನಡೆದ ಅಸ್ಸುಪ್ಫಾ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.

ಯುವಕರು ಧಾರ್ಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಇಸ್ಲಾಂ ಹಿಂಸೆ ಅಥವಾ ಅನ್ಯಾಯವನ್ನು ಬಯಸುವುದಿಲ್ಲ. ಕೆಡುಕುಗಳಿಂದ ದೂರವಿರಬೇಕು. ಪ್ರವಾದಿ ಮುಹಮ್ಮದ್ (ಸ) ಅವರು ಜೀವನ ನಮಗೆ ಮಾರ್ಗದರ್ಶನವಾಗಬೇಕು. ಇದು ಅಸ್ಸುಫಾ ತರಗತಿಯಲ್ಲಿ ಕಲಿಯಲು ಸಾಧ್ಯವಾಗಿದೆ ಎಂದವರು ಹೇಳಿದರು.

ಇಕ್ಬಾಲ್ ಹಾಜಿ ಕುಂಪಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ. ರಶೀದ್ ಹಾಜಿ, ಎಚ್.ಎಚ್. ಶಫೀಕ್, ಎಚ್.ಎಚ್.ಖಾಸಿಂ ಹಾಜಿ, ನಾಸಿರ್ ಸಅದಿ, ಬಶೀರ್ ಅಹ್ಸನಿ, ಸಿರಾಜುದ್ದೀನ್ ಸಖಾಫಿ, ಇಕ್ಬಾಲ್ ವಳವೂರು, ಖಾದರ್ ಹಾಜಿ, ಖುಬೈಬ್ ತಂಙಳ್, ಇಸ್ಮಾಯೀಲ್ ಮಾಸ್ಟರ್, ಮುನೀರ್ ಸಖಾಫಿ, ಇಲ್ಯಾಸ್ ಸಖಾಫಿ, ಅಲ್ತಾಫ್ ಕುಂಪಲ, ನಾಸೀರ್ ದೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಜಾಫರ್ ಯು.ಎಸ್.ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News