ಪಾಯಸ ಸೇವಿಸಿ ಅಸ್ವಸ್ಥಗೊಂಡ ತಾಯಿ-ಮಗು ಮೃತ್ಯು
Update: 2016-10-22 21:55 IST
ಮಣಿಪಾಲ, ಅ.22: ಪಾಯಸ ಸೇವಿಸಿ ಅಸ್ವಸ್ಥಗೊಂಡಿದ್ದ ತಾಯಿ ಮಗು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿ ಯಾಗಿದೆ.
ಮೃತರನ್ನು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೆಬ್ಬಲಗೆರೆ ನಿವಾಸಿ ಸಂತೋಷ್ ಎಂಬವರ ಪತ್ನಿ ರಶ್ಮಿತಾ (26) ಹಾಗೂ ಮಗಳು ಅಕ್ಷರ(3) ಎಂದು ಗುರುತಿಸಲಾಗಿದೆ.
ಇವರು ಅ.8ರಂದು ಹೆಬ್ಬಲಗೆರೆ ಮನೆಯಲ್ಲಿ ಹೆಸರುಬೇಳೆ ಪಾಯಸ ಊಟ ಮಾಡಿ ತೀವ್ರ ಅಸ್ವಸ್ಥಗೊಂಡು ವಾಂತಿ ಮಾಡಿದ್ದರು. ಬಳಿಕ ಇವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗಾಗಿ ಅ.15ರಂದು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅ.20ರಂದು ರಾತ್ರಿ ಅಕ್ಷರಾ ಹಾಗೂ 21ರಂದು ಬೆಳಗ್ಗೆ ರಶ್ಮಿತಾ ಮೃತಪಟ್ಟಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.