×
Ad

ಉಪ್ಪಿನಂಗಡಿ: ‘ರಂಗ ಶಿಬಿರ-2016’ರ ಸಮಾರೋಪ

Update: 2016-10-22 23:33 IST

ಉಪ್ಪಿನಂಗಡಿ, ಅ.22: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಇಂತಹ ಶಿಬಿರಗಳು ಸಹಕಾರಿ ಎಂದು ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ದೇವಕಿ ಹೇಳಿದರು. ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ರಂಗ ಶಿಬಿರ-2016ರ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಸಂದರ್ಭ ಮಾತನಾಡಿದ ಇಂದ್ರಪ್ರಸ್ಥ ವಿದ್ಯಾಲಯದ ಪ್ರಾಂಶುಪಾಲ ರವೀಂದ್ರ ದರ್ಬೆ, ಶಿಕ್ಷಣವೆಂದರೆ ವಿದ್ಯಾರ್ಥಿಗಳಿಗೆ ವಿಷಯವನ್ನು ತುರುಕುವುದಲ್ಲ. ಬದಲಾಗಿ ವಿದ್ಯಾರ್ಥಿಗಳಿಂದ ಪ್ರತಿಭೆಯನ್ನು ಹೊರ ತೆಗೆದು ಪ್ರಕಾಶಿಸುವಂತೆ ಮಾಡುವುದು. ಅಂತಹ ನೈಜ ಶಿಕ್ಷಣವನ್ನು ಕಲಾ ಕ್ಷೇತ್ರದಲ್ಲಿ ನೀಡಲು ವಿಪುಲವಾದ ಅವಕಾಶಗಳಿವೆ ಎಂದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮೊಯ್ದಿನ್ ಕುಟ್ಟಿ ಮಾತನಾಡಿದರು. ಶಿಬಿರದ ಸಂಯೋಜಕ ಸದಾಶಿವ ಭಟ್ ಶಿವಗಿರಿ ಉಪಸ್ಥಿತರಿದ್ದರು.
 ಇದೇ ವೇಳೆ ಶಿಬಿರಾರ್ಥಿಗಳಿಂದ ರಚಿತವಾದ ಕವನ ಚಿತ್ರಗಳನ್ನು ಒಳಗೊಂಡ ‘ಮೊದಲ ಹೆಜ್ಜೆ’ ಎಂಬ ಕಿರು ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು. ಶಿಬಿರದಲ್ಲಿ ಕೃಷ್ಣಪ್ಪ, ಪರಶುರಾಮ್ ಲದ್ವಾ, ಅಶ್ವಿನಿ ಕೆ, ವಿಜೇತ್ ಜೈನ್, ಸುಮನ್ ಪಿ. ಲದ್ವಾ, ಕೃಷ್ಣ ಪ್ರಸಾದ್, ಬಾಲಕೃಷ್ಣ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಶಿಬಿರಾರ್ಥಿಗಳಿಂದ ಪ್ರಕೃತ್ವ ಮಹತ್ವ ವನ್ನು ಸಾರುವ 7 ಕಿರುನಾಟಕಗಳು ಪ್ರದರ್ಶನಗೊಂಡವು. ನಾಟಕದಲ್ಲಿ ಹುಲಿ ಪಾತ್ರದಾರಿ ಅಭಿನಯಿಸಿದ ಅಭಿರಾಮ್ ಎಂಬ ವಿದ್ಯಾರ್ಥಿಯ ನಟನೆ ಸಭಿಕರ ಮನಗೆದ್ದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News