×
Ad

ಶರಿಯತ್ ಕಾನೂನಿಗೆ ಕೇಂದ್ರದಿಂದ ಹಸ್ತಕ್ಷೇಪ

Update: 2016-10-22 23:35 IST

ಮಂಗಳೂರು, ಅ.22: ಶರಿಯತ್ ಕಾನೂನಿಗೆ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಆಕ್ಷೇಪಿಸಿರುವ ಮುಸ್ಲಿಮ್ ಸೆಂಟ್ರಲ್ ಕಮಿಟಿಯು ಈ ಬಗ್ಗೆ ಪ್ರತಿಭಟನೆಗೆ ನಿರ್ಣಯ ಕೈಗೊಂಡಿದೆ. ದ.ಕ. ಜಿಲ್ಲಾ ಮತ್ತು ಉಡುಪಿ ಜಿಲ್ಲೆ ಎಲ್ಲಾ ಮುಸ್ಲಿಮ್ ಸಂಘಟನೆಗಳು ಮುಸ್ಲಿಮ್ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಸಿ ಈ ನಿರ್ಣಯ ಕೈಗೊಳ್ಳಲಾಯಿತು. ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮುಸ್ಲಿಮರ ಸಹಿ ಸಂಗ್ರಹಿಸಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಮೂಲಕ ಭಾರತದ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಗೆ ಸಲ್ಲಿಸಲು ತೀರ್ಮಾನಿಸಲಾಯಿತು ಸಮಿತಿಯ ಪದಾಧಿಕಾರಿಗಳಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಮುಹಮ್ಮದ್ ಹನೀಫ್, ಕೆ. ಅಶ್ರಫ್, ಇಮ್ತಿಯಾಝ್ ಅಹ್ಮದ್ ಕಾರ್ಕಳ, ಬಿ.ಎಂ. ಮುಮ್ತಾಝ್ ಅಲಿ, ಬಾಷಾ ತಂಙಳ್, ಹಮೀದ್ ಕುದ್ರೋಳಿ, ಡಿ.ಎಂ. ಅಸ್ಲಂ, ದ.ಕ. ಜಿಲ್ಲಾ ವಕ್ಫ್ ಬೋರ್ಡ್‌ನ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್, ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಯಹ್ಯಾ ನಖ್ವಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಶರೀಫ್ ಹಾಜಿ, ಮುಹಮ್ಮದ್ ಕುಂಞಿ, ಇಸ್ಮಾಯೀಲ್ ಶಾಫಿ, ಮರಾಠಿ ಮೂಲೆ ಮೊಯ್ದಿನ್ ಕುಂಞಿ, ಸಾದುದ್ದೀನ್ ಸಾಲಿಹ್, ತಫ್ಸೀರ್, ರಫಿಉದ್ದೀನ್ ಕುದ್ರೋಳಿ, ರಝಾಕ್ ಕೆಮ್ಮಾರ, ಇಕ್ಬಾಲ್ ಮುಲ್ಕಿ, ಇಸ್ಮಾಯೀಲ್, ಹನೀಫ್ ಖಾನ್ ಕೊಡಾಜೆ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು. ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ನಿರ್ದೇಶನದಂತೆ ಮುಂದಿನ ಕ್ರಮಕೈಗೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News