ಹಿಂದುಸ್ಥಾನ್ ಯುನಿಲಿವರ್ ಲಿಮಿಟೆಡ್ ಪ್ರಾಯೋಜಿತ ‘ಪ್ರಬಾತ್’ ಕಾರ್ಯಾಗಾರ ಸಮಾರೋಪ
ಮುಲ್ಕಿ, ಅ.22: ಭಾವನಾ ಸೂಚ್ಯಂಕ (ಇಮೋಶನಲ್ ಇಂಟೆಲಿಜೆನ್ಸ್)ದಿಂದ ತನ್ನನ್ನು ತಾನು ಅರಿಯುವ ಸಾಮರ್ಥ್ಯ ಲಭಿಸುತ್ತದೆ. ವಿಧ್ಯಾರ್ಥಿಗಳು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡುವಾಗ ತಮ್ಮ ಭಾವನಾ ಸೂಚ್ಯಂಕವು ಸೂಚಿಸುವ ಪ್ರಕಾರ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಭಾವನಾ ಸೂಚ್ಯಂಕವು ಸ್ವಂತಿಕೆಯ ಅರಿವು, ಸ್ವಯಂ ಪ್ರೇರಣೆ ಮತ್ತು ಸಾಮಾಜಿಕ ಕಾಳಜಿಯನ್ನು ಒಳಗೊಂಡಿರುತ್ತದೆ ಎಂದು ಹಿಂದುಸ್ಥಾನ್ ಯುನಿಲಿವರ್ ಸಂಸ್ಥೆಯ ಮಂಗಳೂರಿನ ಪ್ರಬಂಧಕಿ ರೇಶ್ಮಾ ಜಾಕೊಬ್ ಹೇಳಿದ್ದಾರೆ.
ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಉದ್ಯೋಗ ಮಾರ್ಗದರ್ಶನ ಮತ್ತು ವೃತ್ತಿ ನಿಯೋಜನಾ ಕೋಶದ ಆಶ್ರಯದಲ್ಲಿ ಹಿಂದುಸ್ಥಾನ್ ಯುನಿಲಿವರ್ ಲಿಮಿಟೆಡ್ ಪ್ರಾಯೋಜಿತ ತರಬೇತಿ ಕಾರ್ಯಕ್ರಮ ‘ಪ್ರಭಾತ್’ ತರಬೇತಿ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲ ಪ್ರೊ ಎಮ್. ವಿಶ್ವನಾಥ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಲೇಬರ್ ನೆಟ್ ತರಬೇತಿ ಸಂಸ್ಥೆಯ ಪ್ರಬಂಧಕ ಅಮರೇಷ್ ಮತ್ತು ತರಬೇತುದಾರ ಲಾಂಚನ್ ಉಪಸ್ಥಿತರಿದ್ದರು. ಇದೇ ವೇಳೆ ತರಬೇತಿಯಲ್ಲಿ ಭಾಗವಹಿಸಿದ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾಲೇಜಿನ ಉದ್ಯೋಗ ಮಾರ್ಗದರ್ಶನ ಮತ್ತು ವೃತ್ತಿ ನಿಯೋಜನಾ ಕೋಶದ ಸಂಯೋಜಕ ಡಾ. ಸಂತೋಷ್ ಪಿಂಟೊ ಶಿರ್ತಾಡಿ ಕಾರ್ಯಕ್ರಮ ಆಯೋಜಿಸಿ ಅತಿಥಿಗಳನ್ನು ಪರಿಚಯಿಸಿದರು.