×
Ad

ಮುಖ್ಯಮಂತ್ರಿ ಪರಿಹಾರ ನಿಧಿ ವಿತರಣೆ

Update: 2016-10-22 23:39 IST

ಮಂಗಳೂರು, ಅ. 22: ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಅವರ ಶಿಫಾರಸನ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ವಿವಿಧ ಕಾಯಿಲೆಯಿಂದ ಬಳಲುತ್ತಿರುವ 5 ಮಂದಿ ಅರ್ಜಿದಾರರಿಗೆ ಒಟ್ಟು 3,95,171 ರೂ. ಪರಿಹಾರ ಧನದ ಚೆಕ್‌ನ್ನು ಶನಿವಾರ ವಿತರಿಸಲಾಯಿತು.
ರಿಚರ್ಡ್ ಸಾಲಿಸ್ ಬಿನ್ ಲಿಯೋ ಸಾಲಿಸ್ ಉಡುಪಿ ಅವರಿಗೆ 1 ಲಕ್ಷ ರೂ., ಬೇಬಿ ಫಿಲ್ಜ ಅಬ್ದುಲ್ ರಹ್ಮಾನ್ ಬಿನ್ ಅಬ್ದುರ್ರಹ್ಮಾನ್ ಬಂಟ್ವಾಳ ಅವರಿಗೆ 1 ಲಕ್ಷ ರೂ., ಅಲಿಮಮ್ಮ ಗುರುಪುರ ಅವರಿಗೆ 1,04,668 ರೂ., ಮುಹಮ್ಮದ್ ನಾಸಿರ್ ಪುತ್ತೂರು ಅವರಿಗೆ 72,147 ರೂ., ಮರಿಯಾ ಪ್ರಭು ಪುತ್ತೂರು ಅವರಿಗೆ 18,356 ರೂ. ಧನ ಸಹಾಯದ ಚೆಕ್‌ನ್ನು ಐವನ್ ಡಿಸೋಜಾ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News