ಆಳ್ವಾಸ್‌ನಲ್ಲಿ ಕಾರ್ಟೂನಿಂಗ್ ಕಾರ್ಯಾಗಾರ
Update: 2016-10-22 23:41 IST
ಮೂಡುಬಿದಿರೆ, ಅ.22: ಕಾರ್ಟೂನ್ ಚಿತ್ರಗಳೆಂದರೆ ಕೇವಲ ಗೆರೆಗಳಲ್ಲ. ಅದು ಬೌದ್ಧಿಕತೆಯ ತುಣುಕುಗಳು. ಬುದ್ಧಿವಂತಿಕೆ ಮತ್ತು ಸೃಜನಶೀಲತೆ ಜತೆ ಗೂಡಿದಾಗ ಉತ್ತಮ ಕಾರ್ಟೂನ್ ಚಿತ್ರವೊಂದು ಮೂಡಿ ಬರಲು ಸಾಧ್ಯ. ಇಂದಿನ ದಿನಗಲ್ಲಿ ಕಾರ್ಟೂನ್‌ಗಳ ಮೂಲಕ ಚಿತ್ರಕಾರರು ಮಾಧ್ಯಮ ಪ್ರಚಲಿತ ವಿಚಾರಗಳಲ್ಲಿ ಮುಖ್ಯಪಾತ್ರ ವಹಿಸುತ್ತಿದ್ದಾರೆ ಎಂದು ಪತ್ರಿಕಾ ರಂಗದ ಕಾರ್ಟೂನಿಸ್ಟ್ ದಿನೇಶ್ ಕುಕ್ಕುಜಡ್ಕ ಹೇಳಿದರು. ಆಳ್ವಾಸ್ ಕಾಲೇಜಿನಲ್ಲಿ ಪತಿಕೋದ್ಯಮ ವಿಭಾಗದ ವತಿಯಿಂದ ನಡೆದ ಕಾರ್ಟೂನ್ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು ವಿಭಾಗದ ಮುಖ್ಯಸ್ಥೆ ಡಾ.ವೌಲ್ಯ ಜೀವನರಾಂ, ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮ್ಯಾನೇಜ್‌ಮೆಂಟ್ ವಿಭಾಗದ ಬಿವಿಎ ಹಾಗೂ ಕಾರ್ಟೂನ್ ಕ್ಲಬ್ ಸದಸ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.