ಫರಂಗಿಪೇಟೆ:ಮನೆಯೊಂದರ ಬಳಿ ಹೆಬ್ಬಾವು ಪ್ರತ್ಯಕ್ಷ
Update: 2016-10-23 14:05 IST
ಫರಂಗಿಪೇಟೆ, ಅ.23: ಇಲ್ಲಿನ ರಶೀದ್ ಪಾವೂರು ಎಂಬವರ ಮನೆಯ ಹಿಂಭಾಗದಲ್ಲಿ ಕಳೆದ ರಾತ್ರಿ ಸುಮಾರು 32 ಕೆಜಿ ತೂಕದ ಹೆಬ್ಬಾವೊಂದು ಕಾಣಿಸಿಕೊಂಡಿದೆ. ಈ ಹೆಬ್ಬಾವನ್ನು ಹಿಡಿದು ಫರಂಗಿಪೇಟೆ ಹೊರಠಾಣೆಯ ಪೊಲೀಸರ ಮೂಲಕ ಪಿಲಿಕುಳ ನಿಸರ್ಗಧಾಮಕ್ಕೆ ಒಪ್ಪಿಸಲಾಯಿತು.
ಮಕ್ಕಳು ಮನೆಯ ಹಿಂಭಾಗದಲ್ಲಿ ಹಾವನ್ನು ಕಂಡು ಪೈಪ್ ಎಂದು ಭಾವಿಸಿ ಅಲ್ಲೊಂದು ಪೈಪ್ ಇದೆ ಎಂದು ಮನೆಯವರಲ್ಲಿ ತಿಳಿಸಿದ್ದರು. ಕೂಡಲೇ ಮನೆಯವರು ಮನೆಯ ಹಿಂದೆ ಹೋಗಿ ನೋಡಿದಾಗ ಹೆಬ್ಬಾವು ಎಂದು ತಿಳಿದು ಬಂದಿದೆ. ಕೂಡಲೇ ರಶೀದ್ ಪಾವೂರು ಇಮ್ರಾನ್ ಅಮೆಮಾರ್ ಎಂಬವರನ್ನು ಕರೆಸಿ ಪರಿಸರದ ಯುವಕರ ಸಹಾಯದಿಂದ ಹೆಬ್ಬಾವನ್ನು ಹಿಡಿದರು. ಬಳಿಕ ಹಾವನ್ನು ಫರಂಗಿಪೇಟೆ ಹೊರಠಾಣೆಗೆ ತಂದು ಪಿಳಿಕುಳ ನಿಸರ್ಗಧಾಮಕ್ಕೆ ಕಳುಹಿಸಿಕೊಡಲಾಯಿತು
ಹೆಬ್ಬಾವನ್ನು ಹಿಡಿಯಲು ಬಾಪಿ, ಅಶ್ರಫ್, ಫಲುಲು ಲತೀಫ್, ಮುಹಮ್ಮದ್ ಸಕ್ಸಝ್ ಟಿ.ಕೆ., ಯೂನುಸ್ ಮತ್ತಿತರರು ಸಹಕರಿಸಿದ್ದರು.