×
Ad

ವಿಟ್ಲ: ಎಸ್‌ಜೆಎಂ ರೇಂಜ್ ಕಾನ್ಫರೆನ್ಸ್ ಸಮಾಪ್ತಿ

Update: 2016-10-23 18:05 IST

ವಿಟ್ಲ, ಅ.23: ಎಸ್ಇಡಿಸಿಯ ಸ್ಫಟಿಕ ಸಂಭ್ರಮದ ಪ್ರಯುಕ್ತ ಸುನ್ನೀ ಜಂಇಯತುಲ್ ಮುಅಲ್ಲಿಮೀನ್ (ಎಸ್‌ಜೆಎಂ) ವಿಟ್ಲ ರೇಂಜ್ ಸಮಿತಿಯು ಹಮ್ಮಿಕೊಂಡ ರೇಂಜ್ ಕಾನ್ಫರೆನ್ಸ್ ಶನಿವಾರ ಸಮಾಪ್ತಿಗೊಂಡಿತು. ಧ್ವಜಾರೋಹಣದ ಬಳಿಕ ಮುಅಲ್ಲಿಮ್ ಮುಲಾಖಾತ್ ನಡೆಯಿತು. ರೇಂಜ್ ಮಿಶನರಿ ಕಾರ್ಯದರ್ಶಿ ಅಬ್ದುರ್ರಝಾಕ್ ಸಅದಿ ಸ್ವಾಗತಿಸಿದರು. ಮಿಷನರಿ ವಿಭಾಗದ ಅಧ್ಯಕ್ಷ ಸುಲೈಮಾನ್ ಸಖಾಫಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಜಂಇಯತುಲ್ ಉಲಮಾ ನಾಯಕ ಇಬ್ರಾಹೀಂ ಮದನಿ ಕಂಬಳಬೆಟ್ಟು ಸಭೆಯನ್ನು ಉದ್ಘಾಟಿಸಿದರು. ಎಸ್ಇಡಿಸಿ ಸದಸ್ಯ ಮುತ್ತಲಿಬ್ ಸಖಾಫಿ ಸರಳಿಕಟ್ಟೆ ವಿಷಯ ಮಂಡಿಸಿದರು.ಅಬ್ಬಾಸ್ ಮದನಿ ವಂದಿಸಿದರು.

ಅಪರಾಹ್ನ ಮ್ಯಾನೇಜ್ಮೆಂಟ್ ಮೀಟ್ ನಡೆಯಿತು. ರೇಂಜ್ ಅಧ್ಯಕ್ಷ ಅಬ್ದುಲ್ ಮಜೀದ್ ಮದನಿ ದುಆ ನೆರವೇರಿಸಿದರು. ಒಕ್ಕೆತ್ತೂರು ಜಮಾಅತ್ ಕಮಿಟಿ ಅಧ್ಯಕ್ಷ ವಿ.ಎಂ. ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು. ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಶನ್‌ನ ರೀಜನಲ್ ಅಧ್ಯಕ್ಷ ಕೆ.ಎ. ಹಮೀದ್ ಹಾಜಿ ಕೊಡಂಗಾಯಿ ಉದ್ಘಾಟಿಸಿದರು. ಎ.ಎಂ.ಜಾಫರ್ ಸಅದಿ ಪಳ್ಳತ್ತೂರು ವಿಷಯ ಮಂಡಿಸಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ, ಎಸ್ಎಮ್ಎ ಪ್ರಧಾನ ಕಾರ್ಯದರ್ಶಿ ಕಾಸಿಂ ಸಖಾಫಿ ಕೊಳಂಬೆ ವಂದಿಸಿದರು.

ಅಸರ್ ನಮಾಝಿನ ಬಳಿಕ ನಡೆದ ಎಸ್‌ಬಿಎಸ್ ಬಾಲಮುನ್ನಡೆಯು ಡಿವಿಷನ್ ಕಾರ್ಯದರ್ಶಿ ವಿ.ಎಂ. ಅಬೂಬಕ್ಕರ್ ಸಖಾಫಿಯವರ ದುಆದೊಂದಿಗೆ ಆರಂಭಗೊಂಡಿತು. ಚೇರ್ಮ್ಯಾನ್ ಅಬ್ದುರ್ರಝಾಕ್ ಸಖಾಫಿ ಕೆಲಿಂಜ, ಕ್ಯಾಪ್ಟನ್ ಹೈದರ್ ಅಳಕೆಮಜಲುರಿಗೆ ಧ್ವಜ ನೀಡುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ಅಬ್ದುಲ್ ಸಲಾಂ ಮದನಿ ಅಳಿಕೆ ಮುಂದಾಳುತ್ವ ವಹಿಸಿದರು.

ಮಗ್ರಿಬ್ ನಮಾಝ್ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮನ್ಶರ್ ವಿದ್ಯಾರ್ಥಿಗಳಿಂದ ಬುರ್ದಾ ಮತ್ತು ಕವ್ವಾಲಿ ಪ್ರದರ್ಶನ ನಡೆಯಿತು.
 
ಸ್ವಾಗತ ಸಮಿತಿ ಗೌರವಾಧ್ಯಕ್ಷ ಸಯ್ಯದ್ ಹಬೀಬುಲ್ಲಾ ಪೂಕೋಯ ತಂಙಳ್ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಂಇಯ್ಯತುಲ್ ಉಲಮಾ ಮುಖಂಡ ಶೈಖುನಾ ವಾಲೆಮುಂಡೋವು ಉಸ್ತಾದ್ ಉದ್ಘಾಟಿಸಿದರು. ಸುನ್ನೀ ಯುವಜನ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಕೆ. ಉಮರ್ ಸಖಾಫಿ ಕಂಬಳಬೆಟ್ಟು, ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಸಿರಾಜುದ್ದೀನ್ ಸಖಾಫಿ ಕನ್ಯಾನ, ಅಬೂಬಕರ್ ಸುನ್ನಿ ಫೈಝಿ, ದ.ಕ.ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್. ಮುಹಮ್ಮದ್ ಎಸ್‌ವೈಎಸ್ ಸೆಂಟರ್ ಮುಖಂಡರಾದ ಕೆ.ಎಂ. ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ಕೆ.ಎ. ಇಬ್ರಾಹೀಂ ಮುಸ್ಲಿಯಾರ್, ಡಿವಿಷನ್ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಸಖಾಫಿ, ಕಾರ್ಯದರ್ಶಿ ಸಲೀಂ ಹಾಜಿ ಬೈರಿಕಟ್ಟೆ ಮುಫತ್ತಿಷ್ ಹಸನ್ ಸಖಾಫಿ ಮಾತನಾಡಿದರು.

ಖ್ಯಾತ ವಿದ್ವಾಂಸ ಮುಹ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ ಮುಖ್ಯ ಭಾಷಣ ಮಾಡಿದರು. ಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಅಬ್ದುರ್ರಹ್ಮಾನ್ ನೆಲ್ಲಿಗುಡ್ಡೆ, ಸಮಾಜ ಸೇವಕರಾದ ರಶೀದ್ ವಿಟ್ಲ, ಹನೀಫ್ ಹಾಜಿ ಗೋಳ್ತಮಜಲು, ಶಾಕಿರ್ ಅಳಕೆಮಜಲು, ಕೆಸಿಎಫ್ ನಾಯಕರಾದ ಹಕೀಂ ನೆಕ್ಕರೆ, ಅಬ್ದುಲ್ ಖಾದರ್ ಫೈಝಿ, ಶರೀಫ್ ಕರೈ, ಮಾನೇಜ್‌ಮೆಂಟ್ ಮುಖಂಡರಾದ ಉಸ್ಮಾನ್ ಟಿಪ್ಪುನಗರ, ಹಾರಿಸ್ ಒಕ್ಕೆತ್ತೂರು, ಖಾದರ್ ಖಲೀಫ ಡಿವಿಷನ್ ನಾಯಕರಾದ ಮುಸ್ತಫ ಕೋಡಪದವು, ಅಝೀಝ್ ಮದನಿ ಮಂಗಳಪದವು, ರಝಾಕ್ ಪೆಲ್ತಡ್ಕ, ಅಬ್ದುರ್ರಹ್ಮಾನ್ ಶರಫಿ, ಅಬೂಬಕರ್ ಅಝ್ಹರಿ, ರೇಂಜ್ ನಾಯಕರಾದ ಹನೀಫ್ ಸಅದಿ, ಸಿ.ಎಚ್. ಹನೀಫ್, ರಝಾಕ್ ಮುಸ್ಲಿಯಾರ್ ಕೊಡಂಗೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಂಇಯತುಲ್ ಉಲಮಾ ಜಿಲ್ಲಾ ನಾಯಕರಾದ ಇಬ್ರಾಹೀಂ ಫೈಝಿ ಕನ್ಯಾನ, ಮುಹಮ್ಮದಲಿ ಫೈಝಿ ಬಾಳೆಪುಣಿ, ತೋಕೆ ಉಸ್ತಾದ್, ವಾಲೆಮುಂಡೊವ್ ಉಸ್ತಾದ್ ಹಾಗೂ ಸುನ್ನೀ ಶಿಕ್ಷಣ ಮಂಡಳಿಯ ಕಳೆದ ಸಾಲಿನ ರಾಂಕ್ ವಿಜೇತರು, ಅಧ್ಯಾಪಕರನ್ನು ಸನ್ಮಾನಿಸಲಾಯಿತು.

ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಝಿಯಾದ್ ಮಾಸ್ಟರ್ ಬೈರಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು, ಸ್ವಾಗತ ಸಮಿತಿಯ ಅಧ್ಯಕ್ಷ ಇಸ್ಮಾಯೀಲ್ ಮಾಸ್ಟರ್ ಸ್ವಾಗತಿಸಿ, ಕನ್ವೀನರ್ ಎಂಕೆ.ಎಂ. ಕಾಮಿಲ್ ಸಖಾಫಿ ಕೊಡಂಗಾಯಿ ವಂದಿಸಿದರು.

ವರದಿ: ಉಮರ್ ಅಮ್ಜದಿ ಕುಕ್ಕಿಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News