×
Ad

ಸಮಾಜವಾದಿ ಪಕ್ಷದಿಂದ ರಾಮ್ ಗೋಪಾಲ್ ಯಾದವ್ ಆರು ವರ್ಷಗಳ ಕಾಲ ಉಚ್ಚಾಟನೆ

Update: 2016-10-23 18:24 IST

ಲಕ್ನೋ, ಅ.23: ರಾಜ್ಯಸಭಾ ಸದಸ್ಯ  ರಾಮ್ ಗೋಪಾಲ್ ಯಾದವ್ ಅವರನ್ನು  ಸಮಾಜವಾದಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.
ಸಮಾಜವಾದಿ ಪಕ್ಷ ದ ವರಿಷ್ಠ ಮುಲಾಯಂ ಸಿಂಗ್ ಯಾದವ್‌ ಅವರು ರಾಮ್ ಗೋಪಾಲರನ್ನು ಅಮಾನತುಗೊಳಿದ್ದಾರೆ. ರಾಮ್ ಗೋಪಾಲ್ ಅವರು ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಆರೋಪದಲ್ಲಿ ಅವರನ್ನು ಎಸ್ಪಿಯಿಂದ ಹೊರ ಹಾಕಲಾಗಿದೆ. 
ಉತ್ತರ ಪ್ರದೇಶದಲ್ಲಿ ಯಾದವಿ ಕಲಹ ಮುಂದುವರಿದಿದ್ದು, ಮುಖ್ಯ ಮಂತ್ರಿ ಅಖಿಲೇಶ್ ಯಾದವ್ ಅವರು ತನ್ನ ಚಿಕ್ಕಪ್ಪ  ಶಿವಪಾಲ್ ಸಿಂಗ್ ಯಾದವ್ ಹಾಗೂ ಇನ್ನಿತರ ಮೂವರು  ಸಚಿವರನ್ನು ರವಿವಾರ  ಬೆಳಗ್ಗೆ ಸಂಪುಟದಿಂದ ವಜಾಗೊಳಿಸಿದ್ದರು.
ಶಿವಪಾಲ್ ಯಾದವ್  ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಕ್ಯಾಬಿನೆಟ್‌ ಸಚಿವರುಗಳಾದ ನಾರದ್ ರಾಯ್, ಓಂ ಪ್ರಕಾಶ್, ರಾಜ್ಯ ಸಚಿವೆ ಶಾದಾಬ್ ಫಾತಿಮಾ ಅವರನ್ನು ವಜಾಗೊಳಿಸಿ ಮುಖ್ಯ ಮಂತ್ರಿ ಅಖಿಲೇಶ್‌ ಯಾದವ್‌ ಆದೇಶ ನೀಡಿದ್ದರು.
ಈ ಎಲ್ಲ ಬೆಳವಣಿಗೆಗಳ ಬಳಿಕ ಮುಲಾಯಂ ಸಿಂಗ್‌ ನೇತೃತ್ವದಲ್ಲಿ ಇದೀಗ ಸಮಾಜವಾದಿ ಪಕ್ಷದ ನಡೆಯುತ್ತಿದೆ. ಸಂಪುಟದಿಂದ ಹೊರದಬ್ಬಲ್ಪಟ್ಟವರು ಸಭೆಯಲ್ಲಿ ಭಾಗವಹಿಸಿದ್ದಾರೆಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News