ಉಗ್ರರ ಪ್ರಯತ್ನ ವಿಫಲಗೊಳಿಸಿದ್ದ ಯೋಧನಿಗೆ ಶೌರ್ಯ ಪ್ರಶಸ್ತಿ
ಜಮ್ಮು,ಅ.23: ಜಮ್ಮು-ಕಾಶ್ಮೀರದ ಕಥುವಾ ವಿಭಾಗದಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಭಯೋತ್ಪಾದಕರ ಒಳನುಸುಳುವ ಭಾರಿ ಪ್ರಯತ್ನವನ್ನು ವಿಫಲಗೊಳಿಸುಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತನ್ನ ಯೋಧ ಗುರ್ನಾಮ್ ಸಿಂಗ್ ಅವರ ಹೆಸರನ್ನು ಬಿಎಸ್‌ಎಫ್ ಮರಣೋತ್ತರವಾಗಿ ಅತ್ಯುನ್ನತ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಿದೆ.
ಶುಕ್ರವಾರ ಭಯೋತ್ಪಾದಕರ ವಿರುದ್ಧ ಹೋರಾಟದ ಸಂದರ್ಭದಲ್ಲಿ ಗಡಿಯಾಚೆಯಿಂದ ಎರಗಿ ಬಂದಿದ್ದ ಗುಂಡಿನಿಂದ ತೀವ್ರವಾಗಿ ಗಾಯಗೊಂಡು ಜಮ್ಮುವಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ಸಿಂಗ್(26) ಚಿಕಿತ್ಸೆ ಫಲಕಾರಿ ಯಾಗದೇ ಶನಿವಾರ ತಡರಾತ್ರಿ ಕೊನೆಯುಸಿರೆಳೆದಿದ್ದರು.
ಇಲ್ಲಿ ಸಿಂಗ್ ಅವರಿಗೆ ಪುಷ್ಪನಮನದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ಎಫ್‌ನ ವೆಸ್ಟರ್ನ್ ಕಮಾಂಡ್‌ನ ಹೆಚ್ಚುವರಿ ಮಹಾ ನಿರ್ದೇಶಕ ಅರುಣ್ ಕುಮಾರ್ ಅವರು, ಅತ್ಯುನ್ನತ ಶೌರ್ಯ ಪ್ರಶಸ್ತಿಯೂ ಅವರಿಗೆ ಕಡಿಮೆಯೇ. ಅವರು ಇದಕ್ಕೂ ಹೆಚ್ಚಿನ ಗೌರವಕ್ಕೆ ಅರ್ಹರಾಗಿದ್ದಾರೆ ಎಂದರು.
ಅಶೋಕ ಚಕ್ರವು ಶಾಂತಿಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾಗಿದೆ.