ಅ.24-26: ಬೀಡ್ಸ್‌ನಲ್ಲಿ ಬಾಲನ್ ನಾಯರ್‌ರಿಂದ ಬೇಸಿಕ್ ಡಿಸೈನ್ ಕಾರ್ಯಾಗಾರ
Update: 2016-10-23 20:59 IST
ಮಂಗಳೂರು, ಅ.23: ಇನೋಳಿ ಬಿಐಟಿ ಆವರಣದಲ್ಲಿರುವ ಬೀಡ್ಸ್ (ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್)ನಲ್ಲಿ ಅ.24ರಿಂದ 26ರವರೆಗೆ ಬೇಸಿಕ್ ಡಿಸೈನ್ ಕಾರ್ಯಗಾರ ನಡೆಯಲಿದೆ.
ದಿಲ್ಲಿಯ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ ದೇಶದ ಕೇಂದ್ರ ಸಾಂಸ್ಕೃತಿಕ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿರುವ ಹಲವು ಪುರಸ್ಕಾರ ಪಡೆದ, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಬಾಲನ್ ನಂಬಿಯಾರ್ ಬೇಸಿಕ್ ಡಿಸೈನ್ ಬಗ್ಗೆ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.
ಈ ಕಾರ್ಯಗಾರದಲ್ಲಿ ಆಸಕ್ತ ವಿದ್ಯಾರ್ಥಿಗಳು, ವೃತ್ತಿಪರರು, ಕಲಾವಿದರು, ಛಾಯಾಚಿತ್ರಕಾರರು ಹಾಗೂ ಇತರ ಆಸಕ್ತರು ಪಾಲ್ಗೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.