×
Ad

ಬಜರಂಗದಳದ ದಕ್ಷಿಣ ಪ್ರಾಂತ ಅಧಿವೇಶನ ಕೈಗೊಂಡ ನಿರ್ಣಯಗಳು

Update: 2016-10-23 21:57 IST

ಮಂಗಳೂರು, ಅ.23: ವಿಶ್ವ ಹಿಂದೂ ಪರಿಷತ್, ಬಜರಂಗದಳ ದಕ್ಷಿಣ ಪ್ರಾಂತ ಅಧಿವೇಶನದ ಪ್ರಯುಕ್ತ ನಗರದ ಕದ್ರಿ ಮೈದಾನದಲ್ಲಿ ನಡೆದ ‘ಹಿಂದು ಜಯ ಘೋಷ್’ ಸಾರ್ವಜನಿಕ ಸಭೆಯಲ್ಲಿ ಬಜರಂಗದಳ ಕ್ಷೇತ್ರೀಯ ಸಂಯೋಜಕ ಸೂರ್ಯನಾರಾಯಣ ಅಧಿವೇಶನ ಕೈಗೊಂಡ ನಿರ್ಣಯವನ್ನು ಮಂಡಿಸಿದರು.

ನಿರ್ಣಯದ ಪ್ರಮುಖಾಂಶಗಳು

ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು.

ಗೋಹತ್ಯೆ ಸಂಪೂರ್ಣ ನಿಷೇಧಿಸಿ ಗೋ ಹಂತಕರಿಗೆ 7 ವರ್ಷ ಕಠಿಣ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಬೇಕು.

ಗೋ ಕಳ್ಳ ಸಾಗಾಟ ಹಾಗೂ ಹಿಂಸಾತ್ಮಕ ಗೋ ಸಾಗಾಟಕ್ಕೆ ಕಠಿಣ ಶಿಕ್ಷೆ ವಿಧಿಸಬೇಕು.

ಭಾರತವನ್ನು ಮಾಂಸ ನಿರ್ಯಾತ ಮುಕ ದೇಶವನ್ನಾಗಿ ಮಾಡಬೇಕು.

ರಾಜ್ಯದ್ಯಂತ ಗೋ ಶಾಲೆಯ ನಿರ್ಮಾಣ ಮಾಡಬೇಕು.

ಹಾಲು ನೀಡದ ಹಸುಗಳನ್ನು ಸಾಕಲು ಸರಕಾರ ಅನುದಾನ ನೀಡಬೇಕು.

ಭಾರತೀಯ ಗೋವಂಶ ಸಂರಕ್ಷಣೆಗೆ ಹಾಗೂ ಸಂವರ್ಧನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಶೇಷ ಆದ್ಯತೆ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News