ಕಿನ್ನಿಗೋಳಿ: ಹಿರಿಯ ನಾಗರಿಕರಿಗೆ ಗುರುತು ಚೀಟಿ ವಿತರಣೆ

Update: 2016-10-23 17:59 GMT

ಮುಲ್ಕಿ, ಅ.23: ಸರಕಾರದಿಂದ ಹಿರಿಯನಾಗರಿಕರಿಗೆ ಅನೇಕ ಸವಲತ್ತುಗಳು ಲಭ್ಯವಾಗುತ್ತಿದ್ದು, ಅದರ ಸದುಪಯೋಗಪಡೆಯ ಬೇಕಾದರೆ ಗುರುತಿನ ಚೀಟಿ ಅಗತ್ಯ, ಪ್ರತಿಯೊಬ್ಬ ಹಿರಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.

ಮಂಗಳೂರು ಹಿರಿಯ ನಾಗರಿಕರ ಸಂಘದ ಸಹಯೋಗದಲ್ಲಿ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ, ಕಿನ್ನಿಗೋಳಿ ಲಯನ್ಸ್, ಲಯನೆಸ್ ಕ್ಲಬ್, ಕೆಥೋಲಿಕ್ ಸಭಾ, ಎಸ್‌ವಿಪಿ ಏರಿಯಾ ಕೌನ್ಸಿಲ್ ಕಿನ್ನಿಗೋಳಿ, ಯುಗಪುರುಷ, ರೋಟರಿ ಹಾಗೂ ರೋಟರಾಕ್ಟ್ ಸಂಸ್ಥೆಗಳ ಆಶ್ರಯದಲ್ಲಿ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯ ಆವರಣದಲ್ಲಿ ರವಿವಾರ ಹಿರಿಯ ನಾಗರಿಕರಿಗೆ ಗುರುತು ಚೀಟಿ ನೋಂದಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ಸೆಟ್ಟಾ ಆಸ್ಪತ್ರೆಯ ನಿರ್ದೇಶಕಿ ಭಗಿನಿ ಡಾ.ಜೀವಿತಾ ಕಾರ್ಯಕ್ರಮ ಉದ್ಘಾಟಿಸಿದರು.

ಹಿರಿಯ ನಾಗರಿಕರ ಸಂಘದ ಸದಸ್ಯ ಲಾರೆನ್ಸ್ ಫೆರ್ನಾಂಡಿಸ್ ಸೌಲಭ್ಯಗಲ ಬಗ್ಗೆ ಮಾಹಿತಿ ನೀಡಿದರು. ಕಿನ್ನಿಗೋಳಿ ಎಸ್‌ವಿಪಿ ಏರಿಯಾ ಕೌನ್ಸಿಲ್ ಅಧ್ಯಕ್ಷ ಹೆರಾಲ್ಡ್ ಡಿಸೋಜ, ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ಯೋಗೀಶ್ ರಾವ್, ಲಯನೆಸ್ ಅಧ್ಯಕ್ಷೆ ವತ್ಸಲಾ ರಾವ್, ಕಿನ್ನಿಗೋಳಿ ರೋಟರಿ ನಿಯೋಜಿತ ಅಧ್ಯಕ್ಷೆ ಸೆವರಿನ್ ಲೋಬೊ, ರೋಟರ್ಯಾಕ್ಟ್ ಸಭಾಪತಿ ಹೆರಿಕ್ ಪಾಯಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News