×
Ad

ಕವಿತಾ ಟ್ರಸ್ಟ್ ಕೊಂಕಣಿ ಕವಿತೆ ರಚನಾ ಸ್ಪರ್ಧೆ ವಿಜೇತರು

Update: 2016-10-23 23:38 IST

ಮಂಗಳೂರು, ಅ.23: ಕವಿತಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ ಹತ್ತನೆ ಅಖಿಲ ಭಾರತ ಕೊಂಕಣಿ ಕವಿತೆ ರಚನಾ ಸ್ಪರ್ಧೆಯಲ್ಲಿ ಡೋನಾ ಪೌಲಾದ ಅವರ್ ಲೇಡಿ ಆಫ್ ರೋಸರಿ ಹೈಸ್ಕೂಲಿನ 10ನೆ ತರಗತಿ ಎಂಡ್ರಿಯಾ ಮಿನೇಜಸ್ 
ಅವರ ‘ಕಾಣಿ ಮಾಡಾಚಿ’ (ತೆಂಗಿನ ಮರದ ಕಥೆ) ಕವಿತೆಗೆ ಪ್ರಥಮ ಬಹುಮಾನ ಘೋಷಿಸಲಾಗಿದೆ.
ಸರ್ವೋದಯ ಎಜು ಕೇಶನಲ್ ಸೊಸೈಟಿ ಪ್ರೌಢ ಶಾಲೆಯ 7ನೆ ತರಗತಿಯ ಸಾನಿಕಾ ಪವಾರ್ ಬರೆದ ‘ಮ್ಹಾಕಾ ದಿಸ್ತಾ’ (ನನಗನ್ನಿಸುತ್ತಿದೆ) ಕವಿತೆಗೆ ಎರಡನೆ ಬಹುಮಾನ, ಮಂಗಳೂರು ಡೊಂಗರಕೇರಿ ಕೆನರಾ ಪ್ರೌಢಶಾಲೆಯ 8ನೆ ತರಗತಿಯ ಖ್ಯಾತಿ ನಾಯಕ್ ಅವರ ‘ಮೆಗೆಲೊ ಆನ್’ (ನನ್ನ ತಂದೆ) ಕವಿತೆಗೆ, ಗೋವಾದ ಹೋಲಿ ಕ್ರೊಸ್ ಇನ್ಸ್ಟಿಟ್ಯೂಟಿನ ವಿದ್ಯಾರ್ಥಿನಿ ಸಾವರಿ ಫಳ್ ದೇಸಾಯಿ ಅವರ ‘ಕಿರಾ ಕಿರಾ’ ಕವಿತೆಗೆ ಹಾಗೂ ಸತ್ತಾರಿಯ ಅವರ್ ಲೇಡಿ ಆಫ್ ಲೂರ್ಡ್ಸ್ ಹೈಸ್ಕೂಲಿನ 8ನೆ ತರಗತಿಯ ವಿದ್ಯಾರ್ಥಿ ರಾಹಿ ಗಾಂವ್ಕಾರ್ ಬರೆದ ‘ನ್ಹಂಯ್’ (ನದಿ) ಕವಿತೆಗೆ ತೃತೀಯ ಬಹುಮಾನ ದೊರೆತಿದೆ.
ನ.6ರಂದು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗುವ ಕಾರ್ಯಕ್ರಮದಲ್ಲಿ ಕನ್ನಡ ಲೇಖಕ ನರೇಂದ್ರ ಪೈ ಬಹುಮಾನಗಳನ್ನು ವಿತರಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News