‘ಕಾರ್ಮಿಕರಲ್ಲಿ ಸಂಘಟಿತ ಹೋರಾಟ ಅಗತ್ಯ’
ಮುಲ್ಕಿ, ಅ.23: ಕಾರ್ಮಿಕರು ಸಂಘಟಿತರಾಗಿ ಹೋರಾಡಿದಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಹೇಳಿದರು.
ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಂಘಟನೆ ಎಲ್‌ಐಸಿ ಎಒಐ ಮುಲ್ಕಿ ಘಟಕದ 12ನೆ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಎಲ್‌ಐಸಿ ಎಒಐ ರಾಜ್ಯ ಅಧ್ಯಕ್ಷ ಎಫ್.ಎಸ್. ಸಿಂದಗಿ ಗದಗ ಉದ್ಘಾಟಿಸಿದರು. ಮುಲ್ಕಿ ಘಟಕದ ಅಧ್ಯಕ್ಷ ರಮೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕೋತ್ಸವ ಪ್ರಯುಕ್ತ ನಡೆದ ಕ್ರೀಡಾಕೂಟ, ಕಿರು ನಾಟಕ ಹಾಗೂ ನೃತ್ಯ ರೂಪಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಎಲ್‌ಐಸಿ ಎಒಐ ಉಡುಪಿ ವಿಭಾಗ ಅಧ್ಯಕ್ಷ ಜನಾರ್ದನ ಪೇರಾಜೆ, ಮುಲ್ಕಿ ಶಾಖೆಯ ಹಿರಿಯ ಶಾಖಾಧಿಕಾರಿ ಬಿ. ವಿಶ್ವನಾಥ್, ಅಭಿವೃದ್ಧಿ ಅಧಿಕಾರಿಗಳ ಸಂಘದ ಮುಲ್ಕಿ ಶಾಖೆಯ ಅಧ್ಯಕ್ಷ ಲಿಯೋ ತಾವ್ರೊ, ಎಲ್‌ಐಸಿ ಎಒಐ ಮುಲ್ಕಿ ಘಟಕದ ಕಾರ್ಯದರ್ಶಿ ಗ್ರೇಸಿ ಸಿಕ್ವೇರಾ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಸಂಧ್ಯಾ, ರಮೇಶ್ ಕುಮಾರ್, ಮಮತಾ ಗಿರೀಶ್ ಸಸಿಹಿತ್ಲು, ಪದ್ಮನಾಭ ಸುರತ್ಕಲ್ ಮತ್ತಿತರರು ಅತಿಥಿಗಳಾಗಿದ್ದರು.