ತನ್ನ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಸ್ವತಃ ಧೋನಿ ಒಪ್ಪಿಕೊಂಡ ಸತ್ಯವೇನು ಗೊತ್ತೇ?

Update: 2016-10-24 03:24 GMT

ಮೊಹಾಲಿ, ಅ.24: ನ್ಯೂಝಿಲ್ಯಾಂಡ್ ವಿರುದ್ಧದ ಮೂರನೆ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತೀಯ ಕ್ರಿಕೆಟ್ ತಂಡದ ನಾಯಕ ಎಂ.ಎಸ್.ಧೋನಿ ಅಭಿಮಾನಿಗಳಿಗೆ ಮುದ ತಂದಿರಬಹುದು. ಆದರೆ ಅವರೇ ಒಪ್ಪಿಕೊಂಡ ಸತ್ಯ ಏನು ಗೊತ್ತೇ? "ಮಧ್ಯಮ ಕ್ರಮಾಂಕದಲ್ಲಿ ಮುಕ್ತವಾಗಿ ಹೊಡೆತಗಳನ್ನು ತಿರುಗಿಸುವ ಸಾಮರ್ಥ್ಯ ನಷ್ಟವಾಗುತ್ತಿದೆ"

ತಮ್ಮ ಮಾಮೂಲಿ ಕ್ರಮಾಂಕದ ಬದಲು ಧೋನಿ ರವಿವಾರದ ಪಂದ್ಯದಲ್ಲಿ ನಾಲ್ಕನೆ ಕ್ರಮಾಂಕಕ್ಕೆ ಭಡ್ತಿ ಪಡೆದಿದ್ದರು. "ಕೆಳ ಕ್ರಮಾಂಕದಲ್ಲಿ ನಾನು ಸುಧೀರ್ಘ ಕಾಲದಿಂದ ಆಡದಿದ್ದೇನೆ. ಸುಮಾರು 200 ಇನಿಂಗ್ಸ್‌ಗಳಲ್ಲಿ ಬಹುಶಃ ಆ ಕ್ರಮಾಂಕದಲ್ಲಿ ಆಡಿದ್ದೇನೆ. ಆದರೆ ಸ್ವಲ್ಪಮಟ್ಟಿಗೆ ನನಗೆ ಮಧ್ಯಮ ಕ್ರಮಾಂಕದಲ್ಲಿ ಹೊಡೆತಗಳನ್ನು ತಿರುಗಿಸುವ ಸಾಮರ್ಥ್ಯ ನಷ್ಟವಾಗುತ್ತಿದೆ. ಆದ್ದರಿಂದ ನಾನು ಕ್ರಮಾಂಕದಲ್ಲಿ ಭಡ್ತಿ ಪಡೆದು, ಬೇರೆಯವರು ಪಂದ್ಯ ಪೂರ್ಣಗೊಳಿಸುವುದನ್ನು ಬಯಸುತ್ತೇನೆ" ಎಂದು ಬಹುಮಾನ ವಿತರಣೆ ಸಮಾರಂಭದಲ್ಲಿ ನುಡಿದರು.

"ಆದರೆ ನಾನು ಇನ್ನೂ ದೊಡ್ಡ ಹೊಡೆತಗಳ ಸಾಹಸ ಮಾಡಬಲ್ಲೆ ಎಂಬ ವಿಶ್ವಾಸವಿದೆ. 15-20 ರನ್ ಕಳೆದ ಮೇಲೆ ಅದನ್ನು ಬೆಳೆಸಲು ಪ್ರಯತ್ನಿಸಬೇಕು. ಆದರೆ ಮಧ್ಯಮ ಕ್ರಮಾಂಕದಲ್ಲಿ ಅದು ಸಾಧ್ಯವಾಗುತ್ತಿಲ್ಲ. ವಿರಾಟ್ ಜತೆ ಬ್ಯಾಟಿಂಗ್ ಮಾಡುವುದು ಅನುಕೂಲಕರ. ಏಕೆಂದರೆ ಬೌಂಡರಿ ಗಳಿಸುವ ಜತೆಗೆ ಕ್ಷಿಪ್ರವಾಗಿ ಸಿಂಗಲ್ಸ್ ಹಾಗೂ ಡಬಲ್ಸ್ ರನ್ ಪಡೆಯುವುದು ಚೆನ್ನಾಗಿ ಗೊತ್ತು" ಎಂದು ಬಣ್ಣಿಸಿದರು.

ಕೊಹ್ಲಿ ಈ ಪಂದ್ಯದಲ್ಲಿ 134 ಎಸೆತಗಳಲ್ಲಿ 16 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದರು. ಅವರ ಉಪನಾಯಕ ಸ್ಥಾನದ ಬಗ್ಗೆ ಕೇಳಿದ ಪ್ರಶ್ನೆಗೆ, "ಆರಂಭದಿಂದಲೂ ಅವರು ಭಾರತ ಗೆಲ್ಲುವ ನಿಟ್ಟಿನಲ್ಲಿ ಸುಧಾರಣೆಯನ್ನು ಮಾಡುತ್ತಲೇ ಇದ್ದಾರೆ. ಅವರು ಬಹಳಷ್ಟು ಕಲಿತಿದ್ದಾರೆ. ತಮ್ಮ ಸಾಮರ್ಥ್ಯದ ಅರಿವು ಅವರಿಗಿದೆ. ಶ್ರೇಷ್ಠ ಕ್ರಿಕೆಟ್ ಎಂದರೇನು ಎನ್ನುವುದು ಕಷ್ಟ. ಆದರೆ ಕೊಹ್ಲಿ ಭಾರತ ಹೆಮ್ಮೆಪಡುವಂತೆ ಮಾಡಿದ್ದಾರೆ" ಎಂದು ಗುಣಗಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News