ಅಕ್ರಮ ಮರಳು ಸಾಗಾಟ ಪತ್ತೆ: 2 ಲಾರಿ ವಶ
Update: 2016-10-24 15:44 IST
ಪುತ್ತೂರು, ಅ.24: ಕರ್ನಾಟಕದಿಂದ ಕೇರಳಕ್ಕೆ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟ ಪ್ರಕರಣವನ್ನು ಸಂಪ್ಯ ಪೊಲೀಸರು ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಆಲಂತಡ್ಕ ಎಂಬಲ್ಲಿ ಪತ್ತೆ ಮಾಡಿ 2 ಲಾರಿಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರಿನ ಜಾಬೀರ್ ಮತ್ತು ಕಾಸರಗೋಡು ಮುಳ್ಳೆರಿಯಾದ ಫಾರೂಕ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಗಸ್ತು ನಿರತರಾಗಿದ್ದ ಸಂಪ್ಯ ಪೊಲೀಸರು ಆಲಂತಡ್ಕದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಈ ಅಕ್ರಮ ಮರಳು ಸಾಗಾಟ ಪ್ರಕರಣ ಪತ್ತೆಯಾಗಿದೆ. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.