ಬೈಕ್ ಸವಾರನಿಗೆ ಹಲ್ಲೆ: ದೂರು
Update: 2016-10-24 15:46 IST
ಪುತ್ತೂರು, ಅ.24: ಬೈಕಿನಲ್ಲಿ ಹೊರಡಲು ಸಿದ್ಧನಾಗಿದ್ದ ಸವಾರನಿಗೆ ಹಿಂದಿನಿಂದ ಬಂದು ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಘಟನೆ ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಕೃಷ್ಣನಗರ ಎಂಬಲ್ಲಿ ಸಂಭವಿಸಿದೆ.
ಚಿಕ್ಕಮುಡ್ನೂರು ಗ್ರಾಮದ ಕೃಷ್ಣನಗರ ಕೆ.ಆರ್.ಆಚಾರ್ಯ ಸಭಾಂಗಣ ಬಳಿಯ ನಿವಾಸಿ ವಾಸುದೇವ ಆಚಾರ್ಯ ಎಂಬವರ ಪುತ್ರ ನವೀನ್ ಆಚಾರ್ಯ (24) ಹಲ್ಲೆಗೊಳಗಾದವರು.
ತಾನು ತಮ್ಮ ನೆರೆಯವರಾದ ಹರೀಶ್ ಆಚಾರ್ಯ ಎಂಬವರನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಮನೆಗೆ ತೆರಳಲು ಹೊರಡುತ್ತಿದ್ದ ವೇಳೆ ಪ್ರಕಾಶ್ ಆಚಾರ್ಯ ಎಂಬವರು ಹಿಂದಿನಿಂದ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹರೀಶ್ ಆಚಾರ್ಯ ಅವರಿಗೆ ಮರದ ದೊಣ್ಣೆಯಿಂದ ಹೊಡೆಯಲು ಮುಂದಾಗಿದ್ದರು. ಆ ವೇಳೆ ತಡೆಯಲು ಹೋದ ತನ್ನ ತಲೆಗೆ ದೊಣ್ಣೆ ಏಟು ಬಿದ್ದಿದೆ ಎಂದು ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವೀನ್ ಆಚಾರ್ಯ ಆರೋಪಿಸಿದ್ದಾರೆ.
ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.