×
Ad

ಮುಸ್ಲಿಮರು ಹಂದಿ ಮಾಂಸ ತಿನ್ನಬೇಕು ಎಂದ ನಾರ್ವೆ ಸಚಿವೆಯ ರಾಜೀನಾಮೆಗೆ ಆಗ್ರಹ

Update: 2016-10-24 16:08 IST

ಒಸ್ಲೊ,ಅಕ್ಟೋಬರ್ 24: ನಿರಾಶ್ರಿತರಾಗಿ ಬರುವ ಮುಸ್ಲಿಮರ ವಿರುದ್ಧ ವಿವಾದ ಹೇಳಿಕೆಯನ್ನು ನೀಡಿದ ನೋರ್ವೇಜಿಯನ್ ಸಚಿವೆ ರಾಜೀನಾಮೆ ನೀಡಬೇಕೆಂದು ಬಲವಾದ ಆಗ್ರಹ ಕೇಳಿ ಬಂದಿದೆ ಎಂದು ವರದಿಯಾಗಿದೆ. ಆ್ಯಂಟಿ ಇಮಿಗ್ರಂಟ್ ಪ್ರೋಗ್ರಾಮ್ ಪಾರ್ಟಿಯ ಸಿಲ್ವಿ ಲಸ್ತಾಂಗ್ ಫೇಸ್ ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದು, ಇದೀಗ ವಿವಾದವಾಗಿದೆ.

ನೋರ್ವೆಗೆ ಬರುವವರು ಇಲ್ಲಿರುವ ರೀತಿಯನ್ನು ಸ್ವೀಕರಿಸಬೇಕು. ನಾವು ಇಲ್ಲಿ ಹಂದಿ ಮಾಂಸ ತಿನ್ನುತ್ತೇವೆ. ಮದ್ಯಕುಡಿಯುತ್ತೇವೆ. ಮುಖ ತೋರಿಸುತ್ತೇವೆ. ನೀವು ಇಲ್ಲಿ ನಮ್ಮ ನಿರ್ಬಂಧಗಳು ಮತ್ತು ಮೌಲ್ಯಗಳನ್ನುಪಾಲಿಸಲೇಬೇಕಾಗುತ್ತದೆ ಎಂದು ಸಿಲ್ವಿ ಫೇಸ್‌ಬುಕ್‌ನಲ್ಲಿ ಬರೆದಿದ್ದರು.

 ಆದರೆ ಅವರ ಹೇಳಿಕೆ ವಿರುದ್ಧ ಕಟು ಟೀಕೆಗಳು ಕೇಳಿಬಂದಿವೆ. ಈ ದೇಶದಲ್ಲಿ ಮತ್ತು ಇತರ ದೇಶಗಳಲ್ಲಿ ಏನು ತಿನ್ನಬೇಕು ಎಂಬುದನ್ನು ಆಯ್ಕೆ ಮಾಡುವ ಹಕ್ಕು ಎಲ್ಲರಿಗೂ ನೀಡಿದೆ ಎಂದು ಬೆನ್ ಬುಲ್ ಎಂಬ ಫೇಸ್‌ಬುಕ್ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ. ಟೀಕೆಗಳು ಬಂದದ್ದರಿಂದ ತನ್ನ ಹೇಳಿಕೆ ಸ್ಪಷ್ಟೀಕರಣ ನೀಡಲು ಸಚಿವೆ ಮುಂದೆ ಬಂದಿದ್ದಾರೆ. ತನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆಕೆ ಹೇಳಿದ್ದಾರೆ. ಮುಸ್ಲಿಮರು ಹಂದಿಮಾಂಸ ತಿನ್ನುವ, ಮದ್ಯಸೇವಿಸುವ, ಇತರರೊಂದಿಗೆ ಸೇರಿ ಜೀವಿಸಬೇಕಾಗುತ್ತದೆ ಎಂಬುದು ತನ್ನ ಮಾತಿನ ಇಂಗಿತವಾಗಿದೆ ಎಂದು ಸಚಿವೆ ಸ್ಪಷ್ಟೀಕರಣ ನೀಡಿದ್ದಾರೆಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News