ತಪ್ಪಿಸಿಕೊಂಡ ನೂರಾರು ಮಾದಕ ದ್ರವ್ಯ ವ್ಯಸನಿಗಳು

Update: 2016-10-24 15:13 GMT


ಹನೋಯಿ (ವಿಯೆಟ್ನಾಮ್), ಅ. 24: ಕಡ್ಡಾಯ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡಿರುವ ನೂರಾರು ಮಾದಕ ದ್ರವ್ಯ ವ್ಯಸನಿಗಳಿಗಾಗಿ ವಿಯೆಟ್ನಾಮ್ ಪೊಲೀಸರು ಭಾರೀ ಪ್ರಮಾಣದ ಶೋಧ ಆರಂಭಿಸಿದ್ದಾರೆ.


ಮಾದಕ ದ್ರವ್ಯ ಸೇವನೆಯನ್ನು ನಿಯಂತ್ರಿಸಲು ವಿಯೆಟ್ನಾಮ್‌ನ ಕಮ್ಯುನಿಸ್ಟ್ ಸರಕಾರವು ಎರಡು ವರ್ಷಗಳ ಕಡ್ಡಾಯ ಸರಕಾರಿ ಪುನರ್ವಸತಿ ಕಾರ್ಯಕ್ರಮ ನಡೆಸುತ್ತಿದೆ.
ದಕ್ಷಿಣದ ರಾಜ್ಯ ಡಾಂಗ್ ನೈ ಎಂಬಲ್ಲಿರುವ ಪುನರ್ವಸತಿ ಕೇಂದ್ರವೊಂದರಿಂದ 500ಕ್ಕೂ ಅಧಿಕ ವ್ಯಸನಿಗಳು ರವಿವಾರ ರಾತ್ರಿ ಕಾಂಕ್ರೀಟ್ ಗೋಡೆಗಳು ಮತ್ತು ಕಿಟಿಕಿಗಳನ್ನು ಒಡೆದು ಹಾಗೂ ಬಾಗಿಲುಗಳನ್ನು ಮುರಿದು ತಪ್ಪಿಸಿಕೊಂಡಿದ್ದಾರೆ.


ಸಮೀಪದ ರಸ್ತೆಗಳಿಗೆ ವ್ಯಸನಿಗಳು ಪ್ರವಾಹೋಪಾದಿಯಲ್ಲಿ ನುಗ್ಗಿದ್ದಾರೆ. ಆಗ, ಮನೆಯೊಳಗೆ ಕಳಿತು ಬಾಗಿಲುಗಳನ್ನು ಹಾಕಿಕೊಳ್ಳುವಂತೆ ಅಧಿಕಾರಿಗಳು ನಿವಾಸಿಗಳಿಗೆ ಸೂಚನೆ ನೀಡಿದರು.
ಸೋಮವಾರ ಬೆಳಗ್ಗಿನ ವೇಳೆಗೆ 200ಕ್ಕೂ ಅಧಿಕ ವ್ಯಸನಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನೂ 300ರಷ್ಟು ವ್ಯಸನಿಗಳು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News