ಬಲೋಚಿಸ್ತಾನದಲ್ಲಿ ಉಗ್ರರಿಂದ 60ಕ್ಕೂ ಅಧಿಕ ಪೊಲೀಸರ ಹತ್ಯೆ
ಕರಾಚಿ, ಅ.25: ಬಲೂಚಿಸ್ತಾನದಲ್ಲಿ ಪೊಲೀಸರ ತರಬೇತಿ ಅಕಾಡಮಿಯ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಿಂದಾಗಿ ಸುಮಾರು 60ಕ್ಕೂ ಅಧಿಕ ಪೊಲೀಸರು ಬಲಿಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಸೋಮವಾರ ರಾತ್ರಿ 11.15ರ ಹೊತ್ತಿಗೆ 4 ರಿಂದ 6 ಮಂದಿ ಉಗ್ರರ ಗುಂಪೊಂದು ಕ್ವಿಟ್ಟಾದ ಪೊಲೀಸ್ ತರಬೇತಿ ಅಕಾಡಮಿಗೆ ನುಗ್ಗಿ ಪೊಲೀಸರ ಮೇಲೆ ಗುಂಡಿನ ಮಳೆ ಸುರಿಸಿದ್ದಾರೆ. ಇದರಿಂದಾಗಿ 60ಕ್ಕೂ ಹೆಚ್ಚು ತರಬೇತಿ ನಿರತ ಪೊಲೀಸರು ಮೃತಪಟ್ಟರು. 118ಕ್ಕೂ ಹೆಚ್ಚು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಸಿವಿಲ್ ಆಸ್ಪತ್ರೆ,ಮೊಲಾನ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಕ್ವಿಟ್ಟಾದ ಸೇನಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.
ತರಬೇತಿ ಶಾಲೆಯನ್ನು ಪಾಕ್ ಸೇನೆ ಸುತ್ತುವರಿದಿದ್ದು, ಓರ್ವ ಓರ್ವನನ್ನು ಹೊಡೆದುರುಳಿಸಿದ್ದಾರೆ. ಇನ್ನಿಬ್ಬರು ಉಗ್ರರು ಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಮದು ತಿಳಿದು ಬಂದಿದೆ.