×
Ad

ಜೈಶ್ ಮುಖ್ಯಸ್ಥ ಮಸೂದ್ ಅಝರ್ ನ ಖಾತೆ ಸೇರಿದಂತೆ 5,100 ಶಂಕಿತ ಉಗ್ರರ ಬ್ಯಾಂಕ್ ಖಾತೆ ಸ್ಥಗಿತ!

Update: 2016-10-25 14:25 IST

 ಕರಾಚಿ, ಅ.25  ಪೊಲಿಸ್‌ ತರಬೇತಿ ಅಕಾಡಮಿಯ ಮೇಲೆ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಪಾಕಿಸ್ತಾನ ಸರಕಾರ  ಜೈಶ್ ಇ ಮುಹಮ್ಮದ್  ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ‍್ ಹೊದಿರುವ  ಖಾತೆ  ಸೇರಿದಂತೆ ಒಟ್ಟು 5, 100 ಶಂಕಿತ ಉಗ್ರರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿದ್ದು, ಖಾತೆಯಲ್ಲಿರುವ  ಉಗ್ರರ  400 ಮಿಲಿಯನ್  ರೂ.ಹಣವನ್ನು ವಶಪಡಿಸಿಕೊಂಡಿದೆ.
ಸರಕಾರ ಮುಟ್ಟುಗೋಲು ಹಾಕಿರುವ ಖಾತೆಗಳಲ್ಲಿ  ಜೈಶ್ ಇ ಮುಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್  ಹಾಗೂ ಅಲ್ಲಾಹ್ ಬಕ್ಸ್ ಮುಖಂಡನ ಪುತ್ರನ ಖಾತೆಗಳು ಸೇರಿವೆ ಎಂದು  ಮೂಲಗಳು ತಿಳಿಸಿವೆ.
ಆಂತರಿಕ ಸಚಿವಾಲಯದ ಮನವಿಯ ಮೇರೆಗೆ ಪಾಕಿಸ್ತಾನ ಸರಕಾರ ಉಗ್ರರ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News