×
Ad

ಪಾಸ್‌ಪೋರ್ಟ್‌ಗೆ ನಕಲಿ ಸರ್ಟಿಫಿಕೇಟ್: ಮೂವರ ಬಂಧನ

Update: 2016-10-25 18:16 IST

ಮಂಜೇಶ್ವರ, ಅ.25: ಪಾಸ್‌ಪೋರ್ಟಿಗಾಗಿ ನಕಲಿ ದಾಖಲೆ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಮಂಜೇಶ್ವರ ಠಾಣೆ ಎಸ್ಸೈ ಪ್ರಮೋದ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಂಗಲ್ಪಾಡಿಯ ಸಫ್ವಾನ್, ತೌಡುಗೋಳಿಯ ಮುಫೀಕ್, ಹೊಸಂಗಡಿ ಬಂಗ್ರ ಮಂಜೇಶ್ವರದ ರವೂಫ್ ಎಂದು ಗುರುತಿಸಲಾಗಿದೆ.

ಬಂಧಿತರಲ್ಲಿ ಮುಫೀಕ್ ಹಾಗೂ ಸಫ್ವಾನ್ ನಕಲಿ ಜನನ ಪ್ರಮಾಣಪತ್ರದೊಂದಿಗೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ರವೂಫ್ ವ್ಯವಸ್ಥೆ ಮಾಡಿಕೊಟ್ಟಿದ್ದ. ಮುಫೀಕ್‌ಗೆ ಮಂಗಳೂರಿನಿಂದ ಸರ್ಟಿಫಿಕೇಟ್ ಮಾಡಿಕೊಡಲಾಗಿತ್ತು. ಇದಕ್ಕೆ 8,000 ರೂ. ಪಡೆಯಲಾಗಿತ್ತೆಂದು ಮುಫೀಕ್ ಪೊಲೀಸ್ ತನಿಖೆಯಲ್ಲಿ ಹೇಳಿದ್ದಾನೆ. ಸಫ್ವಾನ್ ಮಂಗಲ್ಪಾಡಿಯ ಖಾಸಗಿ ಏಜೆನ್ಸಿ ಮೂಲಕ ನಕಲಿ ಜನನ ಸರ್ಟಿಫಿಕೇಟ್ ಪಡೆದಿದ್ದನೆಂದು ರವೂಫ್ ಹೇಳಿದ್ದಾನೆ.

ಖಾಸಗಿ ಏಜೆನ್ಸಿಯ ಮಾಲಕ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಇದೀಗ ತಲೆಮರೆಸಿಕೊಂಡಿದ್ದು ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬಂದ್ಯೋಡಿನ ಅಶ್ರಫ್‌ ಮಾಲಕತ್ವದ ಅಕ್ಷಯ ಕೇಂದ್ರದ ಮೂಲಕವೂ ನಕಲಿ ಸರ್ಟಿಫಿಕೇಟ್ ಜಾಲ ಕಾರ್ಯಾಚರಿಸುತ್ತಿತ್ತು. ಅಶ್ರಫ್‌ನನ್ನು ಈ ಮೊದಲೇ ಬಂಧಿಸಿದ್ದು ಇದೀಗ ಅಶ್ರಫ್ ನ್ಯಾಯಾಂಗ ಬಂಧನದಲ್ಲಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News