‘ವೃಕ್ಷರಕ್ಷ ವಿಶ್ವರಕ್ಷ’ ಯೋಜನೆಗೆ ಸ್ವರ್ಣವಲ್ಲಿ ಮಠದಿಂದ 2,000 ಸಸಿಗಳು

Update: 2016-10-25 18:49 GMT

ಉಡುಪಿ, ಅ.25: ಪೇಜಾವರ ಶ್ರೀಯವರು ತಮ್ಮ ಪಂಚಮ ಪರ್ಯಾಯದಲ್ಲಿ ಹಮ್ಮಿಕೊಂಡಿರುವ ‘ವೃಕ್ಷರಕ್ಷ ವಿಶ್ವರಕ್ಷ’ ಯೋಜನೆಗೆ ಪರಿಸರ ಆಸಕ್ತರಾಗಿರುವ ಶಿರಸಿ ಸೋಂದಾ ಸ್ವರ್ಣವಲ್ಲಿ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಬೀಟಿ, ನೆಲ್ಲಿ, ಕಾಡುಬಾದಾಮಿ, ಹಲಸು ಮೊದಲಾದ ಸುಮಾರು 4,000 ಸಸಿಗಳನ್ನು ನೀಡಿದ್ದಾರೆ.

ಇವುಗಳಲ್ಲಿ 2,000 ಸಸಿಗಳನ್ನು ನೀಲಾವರ ಗೋಶಾಲೆಯ ಆವರಣದಲ್ಲಿ ನೆಡಲಾಗುವುದು. ಉಳಿದ 2,000 ಸಸಿಗಳು ಕೃಷ್ಣಮಠದಲ್ಲಿ ಸಾರ್ವಜನಿಕ ವಿತರಣೆಗೆ ಲಭ್ಯವಿದೆ. ಆಸಕ್ತರು ಪಡೆದು ಕೊಳ್ಳಬಹುದು ಎಂದು ಪೇಜಾವರ ಮಠದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News