ನೆಕ್ಕಿತ್ತಡ್ಕದಲ್ಲಿ ಬೈಕ್ ಪಲ್ಟಿ: ಸವಾರ ಮೃತ್ಯು
Update: 2016-10-26 13:03 IST
ಕಡಬ, ಅ.26: ಬೈಕೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಸವಾರ ಮೃತಪಟ್ಟ ಘಟನೆ ನೆಕ್ಕಿತ್ತಡ್ಕದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೃತರನ್ನು ಬೈಕ್ ಸವಾರ 102 ನೆಕ್ಕಿಲಾಡಿ ಗ್ರಾಮದ ಕುಡಾಲ ನಿವಾಸಿ ವಿಶ್ವನಾಥ ರೈ(70) ಎಂದು ಗುರುತಿಸಲಾಗಿದೆ. ವಿಶ್ವನಾಥ ರೈಯವರು ಮನೆಯಿಂದ ಪೇಟೆಗೆಂದು ಬೈಕಿನಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿಚರಂಡಿಗೆ ಬಿದಿದ್ದಾರೆ. ಇದರಿಂದ ಗಂಭೀರ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆ.
ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.