ಸಲ್ಮಾನ್ ಖಾನ್ ಅಂಗರಕ್ಷಕನ ವಿರುದ್ಧ ಪ್ರಕರಣ ದಾಖಲು

Update: 2016-10-26 09:11 GMT

ಮುಂಬೈ, ಅ.26: ಬಾಲಿವುಡ್ ನಟ ಸಲ್ಮಾನ್ ಖಾನ್‌ರ ಅಂಗರಕ್ಷಕನ ವಿರುದ್ಧ ವಿಲೇಪಾರ್ಲೆಯ ಪಬ್‌ನ ಸಿಬ್ಬಂದಿಗೆ ಗಂಭೀರ ಹಲ್ಲೆ ನಡೆಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

 ಸಲ್ಮಾನ್ ಅಂಗರಕ್ಷಕ ಶೇರ ಎಂಬಾತ ಪಬ್‌ನ ಸಿಬ್ಬಂದಿಯ ಕುತ್ತಿಗೆಯ ಮೂಳೆ ಮುರಿಯುವಂತೆ ಹಲ್ಲೆ ಮಾಡಿದ್ದಲ್ಲದೆ, ಗನ್ ತೋರಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

‘‘ನಾನು ಪಬ್ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದು ನಿಜ’’ ಎಂದು ‘ಟೈಮ್ಸ್ ನೌ’ ಸುದ್ದಿ ವಾಹಿನಿಗೆ ಶೇರ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಶೇರ ವಿರುದ್ಧ ಐಪಿಸಿ ಸೆಕ್ಷನ್ 326ರ ಅಡಿ ಕೇಸ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News