ಚೈನೀಸ್ ಉತ್ಪನ್ನ ಬಹಿಷ್ಕಾರ: ಮಾರಾಟದಲ್ಲಿಶೇ. 45ರಷ್ಟು ಇಳಿಕೆ

Update: 2016-10-26 10:49 GMT

ಹೊಸದಿಲ್ಲಿ, ಅ. 26: ಚೀನದಿಂದ ಬರುವ ಉತ್ಪನ್ನಗಳನ್ನು ಬಹಿಷ್ಕರಿಸುವ ತೀರ್ಮಾನ ಭಾರತದಲ್ಲಿ ಜಾರಿಯಾಗುತ್ತಿರುವ ಸೂಚನೆ ಲಭಿಸುತ್ತಿದೆ ಎಂದು ವರದಿಯಾಗಿದೆ. ಚೀನದ ಉತ್ಪನ್ನಗಳನ್ನು ಬಹಿಷ್ಕರಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಆರಂಭಗೊಂಡ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿಗೆ ಚೈನೀಸ್ ಉತ್ಪನ್ನಗಳ ಮಾರಾಟದಲ್ಲಿ ಶೇ.45ರಷ್ಟು ಇಳಿಕೆ ದಾಖಲಾಗಿದೆ ಎಂದು ಕಾನ್ಫೆಡರೇಸನ್ ಆಫ್ ಆಲ್ ಇಂಡಿಯ ಟ್ರೇಡರ್ಸ್ ಅಂದಾಜಿಸಿದೆ.

ಈ ಬಾರಿ ದೀಪಾವಳಿಗೆ ಚೀನದ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಸೋಶಿಯಲ್ ಮೀಡಿಯಗಳಲ್ಲಿ ಪ್ರಚಾರವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾರಾಟದಲ್ಲಿ ಶೇ. 45ರಷ್ಟು ಕಡಿಮೆಆಗಿದೆ ಎಂದು ಒಟ್ಟು ವ್ಯಾಪಾರಿಗಳ ಅಭಿಪ್ರಾಯವಾಗಿದೆ.

ಚೀನದ ಪಟಾಕಿ, ಇಲೆಕ್ಟ್ರಾನಿಕ್ ಬಲ್ಬ್‌ಗಳು. ಅಡಿಗೆ ಉಪಕರಣಗಳು, ಆಟಿಕೆಗಳು, ಗಿಫ್ಟ್ ಐಟಂಗಳು ಇಲೆಕ್ಟ್ರಾನಿಕ್ಸ್ ಫಿಟ್ಟಿಂಗ್‌ಗಳು.ಡೆಕರೇಶನ್ ಉತ್ಪನ್ನಗಳು ಮುಂತಾದವುಗಳ ಮಾರಾಟದಲ್ಲಿ ಇಳಿಕೆಯಾಗಿದೆ. ದೀಪಾವಳಿಗೆ ಎರಡು ಮೂರು ತಿಂಗಳ ಮೊದಲೇ ಚೀನದ ಉತ್ಪನ್ನಗಳನ್ನು ಸಂಗ್ರಹಿಸಿಟ್ಟ ವ್ಯಾಪಾರಿಗಳಿಗೆ ಇದು ಹಿನ್ನಡೆಯಾಗಿದ್ದು, ಸೋಶಿಯಲ್ ಮೀಡಿಯದಲ್ಲಿ ಅಭಿಯಾನ ಮುಂದುವರಿದರೆ ಕ್ರಿಸ್‌ಮಸ್, ಹೊಸವರ್ಷಗಳಿಗೂ ಮಾರಾಟದ ಭರಾಟೆ ಇರಲಾರದು ಎಂದು ಅವರು ಆತಂಕಗೊಂಡಿದ್ದಾರೆ.

 ಚೀನದೊಂದಿಗೆ ಕಠಿಣ ಸ್ಪರ್ಧೆ ನೀಡಲು ಸರಕಾರ ಪ್ರಯತ್ನ ಆರಂಭಿಸಿದೆ. ಗುಣಮಟ್ಟದ ಉತ್ಪನ್ನಗಳನ್ನು ದೇಶದೊಳಗೆ ಉತ್ಪಾದಿಸುವ ಸಣ್ಣ ಉದ್ದಿಮೆಗಳನ್ನು ಸರಕಾರ ಪ್ರೋತ್ಸಾಹಿಸತೊಡಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News