×
Ad

ಆರ್ಡಿನೋ ಬೋರ್ಡ್ ಬಳಕೆ ಕುರಿತು ಕಾರ್ಯಾಗಾರ

Update: 2016-10-26 19:40 IST

ಶಿರ್ವ, ಅ.26: ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಶಿಕ್ಷಣ ಗುಣಮಟ್ಟ ಮಂಡಳಿ ಮತ್ತು ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾ ಲಯದ ಐಎಸ್‌ಟಿಇ ವಿದ್ಯಾರ್ಥಿ ಘಟಕಗಳ ಸಹಯೋಗದೊಂದಿಗೆ ಆರ್ಡಿನೋ ಬೋರ್ಡ್ ಬಳಕೆಯ ಕುರಿತು ವಿದ್ಯಾಲಯದಲ್ಲಿ ಆಯೋಜಿಸ ಲಾದ ಎರಡು ದಿನಗಳ ಕಾರ್ಯಾಗಾರವನ್ನು ಬೈಟ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಸುಜಾತಾ ಡಿ.ಎನ್. ಮಂಗಳವಾರ ಉದ್ಘಾಟಿಸಿದರು.

ಟೆನೆಟ್ ಸಂಸ್ಥೆಯ ಉಮಾಶಂಕರ್ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲ ಪ್ರೊ. ತಿರುಮಲೇಶ್ವರ ಭಟ್ ಮಾತನಾಡಿದರು. ಅಧ್ಯಕ್ಷತೆಯನ್ನು ಉಡುಪಿ ಸೋದೆ ವಾದಿರಾಜ ಮಠ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ರತ್ನಕುಮಾರ್ ವಹಿಸಿ ದ್ದರು. ಗಣಕಯಂತ್ರ ವಿಭಾಗದ ಮುಖ್ಯಸ್ಥ ಪ್ರೊ.ವಾಸುದೇವ ಸ್ವಾಗತಿಸಿದರು. ಐಎಸ್‌ಟಿಇ ಘಟಕದ ಸಂಯೋಜಕ ಶಿಜು ವಿ.ಸೋಮನ್ ವಂದಿಸಿದರು.

ಬೆಂಗಳೂರಿನ ಟೆನೆಟ್ ಟೆಕ್ನೆಟ್ರಾನಿಕ್ಸ್‌ನ ತಜ್ಞರು ಆರ್ಡಿನೋ ಬೋರ್ಡ್ ಗಳನ್ನು ಬಳಸಿ ವಿವಿಧ ಪ್ರಾಜೆಕ್ಟ್‌ಗಳನ್ನು ಮಾಡುವ ವಿಧಾನಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News