×
Ad

ನಗರಸಭೆಯ ರೆಫ್ಯೂಸ್ ಕಂಪ್ಯಾಕ್ಟರ್ ವಾಹನ ಉದ್ಘಾಟನೆ

Update: 2016-10-26 19:44 IST

ಉಡುಪಿ, ಅ.26: ಉಡುಪಿ ನಗರಸಭೆಯ 2013-14 ಮತ್ತು 2014- 15ನೆ ಸಾಲಿನ ಎಸ್‌ಎಫ್‌ಸಿ ಅನುದಾನದಡಿ ಘನತ್ಯಾಜ್ಯ ನಿರ್ವಹಣೆಗೆ ಖರೀದಿಸಲಾದ ರೆಫ್ಯೂಸ್ ಕಂಪ್ಯಾಕ್ಟರ್ ವಾಹನವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಬುಧವಾರ ನಗರಸಭೆ ಕಚೇರಿ ಎದುರು ಉದ್ಘಾಟಿಸಿದರು.

33.33 ಲಕ್ಷ ರೂ. ಮೊತ್ತದ ಈ ವಾಹನವು ಘನತ್ಯಾಜ್ಯ ನಿರ್ವಹಣೆಗೆ 14 ಕ್ಯೂಬಿಕ್ ಮೀಟರ್ ಸಾಮರ್ಥ್ಯವನ್ನು ಹೊಂದಿದೆ. ಉಡುಪಿ ನಗರವನ್ನು ಶೇ.100 ಶುದ್ಧ, ಸ್ವಚ್ಛವಾಗಿಸುವುದು ನಮ್ಮ ಗುರಿಯಾಗಿದೆ. ಅದಕ್ಕಾಗಿ ಈ ವಾಹನವನ್ನು ಖರೀದಿಸಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಸದಸ್ಯರಾದ ಯುವರಾಜ್, ಶಶಿರಾಜ್ ಕುಂದರ್, ಗಣೇಶ್ ನೆರ್ಗಿ, ಪರಿಸರ ಅಭಿಯಂತರ ರಾಘವೇಂದ್ರ, ಸತೀಶ್ ಅಮೀನ್ ಪಡುಕೆರೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News