ವಿಟ್ಲ ಎಸ್ಕೆಎಸ್ಸೆಸ್ಸೆಪ್‌ನಿಂದ ಆರೋಗ್ಯ ಕೇಂದ್ರಕ್ಕೆ ನೆಬ್ಲಿಝರ್ ಯಂತ್ರ ಕೊಡುಗೆ
Update: 2016-10-27 19:12 IST
ಬಂಟ್ವಾಳ, ಅ. 27: ಎಸ್ಕೆಎಸ್ಸೆಸ್ಸೆಪ್ ವಿಟ್ಲ ವಲಯ ಸಹಚರಿ ಸೆಂಟರ್ ವತಿಯಿಂದ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೆಬ್ಲಿಝರ್ ಮೆಷಿನ್ ಹಾಗೂ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಶಾಂತ್ ಬಿ.ಎನ್. ಮೂಲಕ ರೋಗಿಗಳಿಗೆ ತುರ್ತು ಸಮಯದಲ್ಲಿ ಬೇಕಾಗುವ ನೆಬ್ಲಿಝರ್ ಮೆಷಿನನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ದಲ್ಲಿ ಶರೀಫ್ ಮೂಸಾ ಕುದ್ದುಪದವು, ಅಶ್ರಫ್ ಕಬಕ, ವಿ.ಎಸ್.ಇಬ್ರಾಹೀಂ ಒಕ್ಕೆತ್ತೂರು, ಅಬ್ದುಲ್ ಹಾಜಿ ಕಡಂಬು, ಶಮೀರ್ ಪಳಿಕೆ, ಸಿ.ಎಚ್.ಇಬ್ರಾಹೀಂ ಮುಸ್ಲಿಯಾರ್ ಪರ್ತಿಪ್ಪಾಡಿ, ಇಬ್ರಾಹೀಂ ಝೈನಿ ಕೊಡಂಗಾಯಿ, ಇಸ್ಮಾಯೀಲ್ ಹನೀಫಿ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಕೆ.ಎ.ಹಸೈನಾರ್ ಮುಸ್ಲಿಯಾರ್, ಬಿ.ಎಂ.ಅಲಿ ವೌಲವಿ ಮೊದಲಾದವರು ಉಪಸ್ಥಿತರಿದ್ದರು.