ಪಾಣೆಮಂಗಳೂರು ದಾರುರ್ರಶಾದ್‌ನ ವಾರ್ಷಿಕ ಮಹಾ ಸಭೆ

Update: 2016-10-27 14:01 GMT

ಬಂಟ್ವಾಳ, ಅ.27: ದಾರುರ್ರಶಾದ್ ಎಜುಕೇಶನಲ್ ಟ್ರಸ್ಟ್‌ನ ವಾರ್ಷಿಕ ಮಹಾಸಭೆಯು ಕೇರಳ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಸೈಯದ್ ಉಮರುಲ್ ಫಾರೂಕ್ ತಂಙಳ್ ಆದೂರು ಇವರ ಅಧ್ಯಕ್ಷತೆಯಲ್ಲಿ ಪಾಣೆಮಂಗಳೂರು ಕಚೇರಿಯಲ್ಲಿ ನಡೆಯಿತು.

ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲ ಸಂಘ ಸಂಸ್ಥೆಗಳು ಸಮಾಜದ ಒಳಿತಿಗಾಗಿ ದುಡಿಯಬೇಕು. ಅನಾಥ ಹಾಗೂ ನಿರ್ಗತಿಕ ಮಕ್ಕಳನ್ನು ಪೋಷಿಸುವ ಬಗ್ಗೆ ಸಂಘ ಸಂಸ್ಥೆಗಳ ನಾಯಕರು ಗಮನ ಹರಿಸಬೇಕು. ಬಡ ವಿದ್ಯಾರ್ಥಿಗಳಿಗೆ ಧಾರ್ಮಿಕ ಹಾಗೂ ಲೌಕಿಕ ಕಲಿಯಲು ನೆರವಾಗುವುದು, ಅನಾಥ ಹೆಣ್ಣು ಮಕ್ಕಳ ಮದುವೆಗೆ ಸಹಾಯ ಮಾಡುವುದು ಸಂಘ ಸಂಸ್ಥೆಗಳ ಗುರಿಯಾಗಬೇಕು. ಇಂತಹ ಕೆಲಸ ಕಾರ್ಯ ಮಾಡುತ್ತಿರುವ ದಾರುರ್ರಶಾದ್ ಟ್ರಸ್ಟ್ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದು ಅವರು ಹೇಳಿದರು.

ನೂತನ ಸಮಿತಿಯ ಅಧ್ಯಕ್ಷರಾಗಿ ಪಿ.ಕೆ.ಅಬ್ದುರ್ರಝಾಕ್ ಪೈಝಿ ನಂದಾವರ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಕೆ.ಹನೀಫ್ ಮದನಿ ಕಡಂಬು ವಿಟ್ಲ, ಕೋಶಾಧಿಕಾರಿಯಾಗಿ ಮುಹಮ್ಮದ್ ಪೈರೋಝ್ ಮತ್ತು ಹನ್ನೊಂದು ಮಂದಿ ಸದಸ್ಯರನ್ನು ನೇಮಕ ವಾಡಲಾಯಿತು. ಸಭೆಯಲ್ಲಿ ಹನೀಫ್ ಮದನಿ ಕಡಂಬು ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News