‘ಮೆಸ್ಕಾಂನಿಂದ ಕೋಟ್ಯಾಂತರ ರೂ. ಅವ್ಯವಹಾರ’: ವರದಿಗೆ ಸ್ಪಷ್ಟೀಕರಣ ನೀಡಿದ ಮೆಸ್ಕಾಂ

Update: 2016-10-27 14:29 GMT

ಮಂಗಳೂರು, ಅ.27: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಗೆ ಸರಕಾರದ ನಿರ್ದೇಶನದನ್ವಯ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಭಾಗವಹಿಸುತ್ತಿರುತ್ತಾರೆ. ಆದರೆ ಸಭೆಗೆ ಹಾಜರಾಗುವಂತೆ ನೀಡಿದ್ದಾರೆನ್ನಲಾದ ಸಭಾ ಸೂಚನಾ ಪತ್ರ ಮೆಸ್ಕಾಂ ಆಡಳಿತ ಕಚೇರಿಗೆ ಬಂದಿರುವುದಿಲ್ಲ ಎಂದು ಮೆಸ್ಕಾಂ ತಿಳಿಸಿದೆ.

ವರದಿಯಲ್ಲಿ ಪ್ರಕಟವಾಗಿರುವ, ತುಂಗಪ್ಪ ಬಂಗೇರರು ಆರೋಪಿಸಿರುವ ವಿಷಯಗಳು ಸತ್ಯಕ್ಕೆ ದೂರವಾಗಿರುತ್ತವೆ. ವಿದ್ಯುತ್ ಪರಿವರ್ತಕಗಳನ್ನು ಸರ್ಕಾರಿ ಸ್ವಾಮ್ಯದ ಕವಿಕಾ ಮತ್ತು ಕೆಇಎಲ್ ಕಂಪೆನಿಗಳಿಂದ ಖರೀದಿಸಲಾಗುತ್ತಿದ್ದು, ಇತರ ಪರಿಕರಗಳನ್ನು ಕೆಟಿಪಿಪಿ ನಿಯಮಗಳ ಪ್ರಕಾರ ಇ-ಟೆಂಡರ್ ಮುಖಾಂತರ ಪಾರದರ್ಶಕವಾಗಿಯೇ ಖರೀದಿಸಲಾಗುತ್ತಿದೆ. 

ಪ್ಯಾಕೇಜ್ ಟೆಂಡರ್‌ಗಳನ್ನು ನೀಡಿರುವ ಬಗ್ಗೆ 

ಯಾವುದೇ ಪರಿಕರಗಳನ್ನು ಖರೀದಿಸಿದರೂ ಇ-ಟೆಂಡರ್ ಮುಖಾಂತರವೇ ಖರೀದಿಸಬೇಕಾಗುತ್ತದೆ. ಆದ್ದರಿಂದ ಇಲ್ಲಿ ಯಾವುದೇ ರೀತಿಯ ಅವ್ಯವಹಾರಕ್ಕೆ ಆಸ್ಪದವಿರುವುದಿಲ್ಲ.

ತುಂಗಪ್ಪ ಬಂಗೇರರು ಮಾಹಿತಿ ಹಕ್ಕು ಕಾಯ್ದೆಯಡಿ 4 ರಿಂದ 5 ವರ್ಷಗಳ ಅವಧಿಯ ಮಾಹಿತಿಯನ್ನು ಕೋರಿದ್ದರು. ಈ ಮಾಹಿತಿಯು ಅಪಾರ ಪ್ರಮಾಣದಲ್ಲಿ ಇದ್ದುದರಿಂದ ಮಾಹಿತಿ ಹಕ್ಕು ಅಧಿನಿಯಮದ ಮೇರೆಗೆ ಅವರನ್ನು ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುವಂತೆ ಕೋರಲಾಗಿತ್ತು. ಕೇಳಿರುವ ಮಾಹಿತಿಗಳು ಕೋರಿಕೆದಾರರಿಗೆ ತಲುಪುವ ಬಗ್ಗೆ ಖಚಿತಪಡಿಸಿಕೊಳ್ಳುವ ಸಲುವಾಗಿ ಕೋರಿಕೆದಾರರ ಗುರುತಿನ ಪತ್ರವನ್ನು ಕೋರಲಾಗಿತ್ತೇ ಹೊರತು, ಅನ್ಯ ಉದ್ದೇಶದಿಂದಲ್ಲ ಎಂಬುದಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News