ಭಾಸ್ಕರ್ ಶೆಟ್ಟಿ ಕೊಲೆ: ಡಿಎನ್‌ಎ ವರದಿ ಸಿಐಡಿಗೆ ಲಭ್ಯ?

Update: 2016-10-27 15:37 GMT

ಉಡುಪಿ, ಅ.27: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಮಹತ್ವ ಸಾಕ್ಷವಾಗಿರುವ ಮೂಳೆಗಳ ಡಿಎನ್‌ಎ ಪರೀಕ್ಷೆಯ ವರದಿ ಸಿಐಡಿ ಪೊಲೀಸ ರಿಗೆ ಲಭ್ಯವಾಗಿದೆ ಎಂದು ಖಚಿತ ಮೂಲಗಳು ತಿಳಿಸಿವೆ.
 
ಗೌಪ್ಯತೆ ದೃಷ್ಠಿಯಿಂದ ವರದಿಯ ಮಾಹಿತಿ ಇನ್ನು ಯಾರಿಗೂ ಗೊತ್ತಾಗಿಲ್ಲ. ಈ ವರದಿಯ ವಿಷಯವನ್ನು ಇಟ್ಟುಕೊಂಡು ಸಿಐಡಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಯ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲಿದ್ದಾರೆ. ಇದೀಗ ಸರಕಾರ ಈ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕರಾಗಿ ಉಡುಪಿಯ ಖ್ಯಾತ ನ್ಯಾಯವಾದಿ ಶಾಂತರಾಮ್ ಶೆಟ್ಟಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಇವರೇ ರಾಜೇಶ್ವರಿ ಶೆಟ್ಟಿ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲ್ಲಿದ್ದಾರೆ. ಆದುದರಿಂದ ನಾಳೆ ನಡೆಯುವ ವಿಚಾರಣೆಯಲ್ಲಿ ಮತ್ತೆ ಇನ್ನಷ್ಟು ಸಮಯಾವಕಾಶ ಕೇಳುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News