ಮೆಕಲಮ್ ರನ್ನು ನ್ಯೂಝಿಲ್ಯಾಂಡ್ ಪ್ರಧಾನಿ ಮಾಡಿದ ಕೇಂದ್ರ ಸಚಿವ ಶರ್ಮ !
Update: 2016-10-27 21:24 IST
ಹೊಸದಿಲ್ಲಿ, ಅ. 27 : ಭಾರತ ಪ್ರವಾಸದಲ್ಲಿರುವ ನ್ಯೂಝಿಲ್ಯಾಂಡ್ ಪ್ರಧಾನಿ ಜಾನ್ ಕೀ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮ ಅವರ ಎಡವಟ್ಟಿನಿಂದ ಮುಜುಗರದ ಪರಿಸ್ಥಿತಿ ನಿರ್ಮಾಣವಾಯಿತು.
ಭಾರತೀಯರನ್ನು ನ್ಯೂಝಿಲ್ಯಾಂಡ್ ಪ್ರವಾಸೋದ್ಯಮಕ್ಕೆ ಆಕರ್ಷಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿನ ಪ್ರಧಾನಿ ಜಾನ್ ಕೀ , ಕ್ರಿಕೆಟ್ ಆಟಗಾರ ಬ್ರೆನ್ದಾನ್ ಮೆಕಲಮ್, ನ್ಯೂಝಿಲ್ಯಾಂಡ್ ಪ್ರವಾಸೋದ್ಯಮದ ರಾಯಭಾರಿ, ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ ಹಾಗು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ "ನ್ಯೂಝಿಲ್ಯಾಂಡ್ ಪ್ರಧಾನಿ ಮೆಕಲಮ್" ಎಂದು ಸಂಭೋಧಿಸಿ ಬಿಟ್ಟರು ಕೇಂದ್ರ ಸಚಿವ ಮಹೇಶ್ ಶರ್ಮ. ಅವರನ್ನು ತಿದ್ದಲು ಹೊರಟ ನಟ ಸಿದ್ಧಾರ್ಥ್ ಕೇಂದ್ರ ಸಚಿವರ ಹೆಸರನ್ನೇ ಮರೆತು ಬಿಟ್ಟರು!. ಇದರಿಂದ ಒಟ್ಟಾರೆ ಮುಜುಗರದ ವಾತಾವರಣ ಉಂಟಾಯಿತು.