×
Ad

‘ನ್ಯಾಶನಲ್ ಜಿಯಾಗ್ರಫಿಕ್’ನಲ್ಲಿ ಕಾಣಿಸಿಕೊಂಡಿದ್ದ ಅಫ್ಘಾನ್ ಮಹಿಳೆಯ ಬಂಧನ

Update: 2016-10-27 23:54 IST

ಇಸ್ಲಾಮಾಬಾದ್, ಅ. 27: ತನ್ನ ದೇಶದಲ್ಲಿ ನಡೆಯುವ ಯುದ್ಧದ ದುಷ್ಪರಿಣಾಮಗಳ ಸಂಕೇತವಾಗಿ 30 ವರ್ಷಗಳ ಹಿಂದೆ ‘ನ್ಯಾಶನಲ್ ಜಿಯಾಗ್ರಫಿಕ್’ ಮ್ಯಾಗಝಿನ್‌ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದ ಅಫ್ಘಾನಿಸ್ತಾನದ ಹಸಿರು ಕಣ್ಣುಗಳ ಮಹಿಳೆಯೊಬ್ಬರನ್ನು ಪಾಕಿಸ್ತಾನದ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ನಿರಾಶ್ರಿತ ಶಿಬಿರವೊಂದರಲ್ಲಿ ಬೆಳೆದ ಶರ್ಬಾತ್ ಗುಲಾ ನಕಲಿ ಪಾಕಿಸ್ತಾನಿ ಗುರುತು ಚೀಟಿಯನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಶನ್ ಏಜನ್ಸಿ (ಎಫ್‌ಐಎ) ಬುಧವಾರ ಬೆಳಗ್ಗೆ ಅವರ ಮನೆಯ ಮೇಲೆ ದಾಳಿ ನಡೆಸಿತು ಎಂದು ಅವರ ಭಾವ ಶಹ್ಶಾದ್ ಖಾನ್ ಹೇಳಿದರು. ಅವರನ್ನು ಪೇಶಾವರದ ಜೈಲಿನಲ್ಲಿ ಇಡಲಾಗಿದೆ.
ವಂಚನೆ ಸಾಬೀತಾದರೆ ಅವರಿಗೆ 14 ವರ್ಷಗಳವರೆಗಿನ ಜೈಲುವಾಸ ಕಾದಿದೆ. ಹದಿಹರೆಯದ ಅಫ್ಘಾನ್ ನಿರಾಶ್ರಿತೆಯಾಗಿ ಶರ್ಬಾತ್‌ರ ಚಿತ್ರ 1985ರಲ್ಲಿ ‘ನ್ಯಾಶನಲ್ ಜಿಯಾಗ್ರಫಿಕ್’ನ ಮುಖಪುಟದಲ್ಲಿ ಪ್ರಕಟಗೊಂಡಿತ್ತು.
ಶರ್ಬಾತ್ ತನ್ನ ಸಹೋದರ ರಹ್ಮತ್ ಖಾನ್‌ರನ್ನು ಮದುವೆಯಾಗಿ ಪಾಕಿಸ್ತಾನಕ್ಕೆ ಬಂದಿದ್ದಾರೆ, ಅವರು ನಿರಾಶ್ರಿತೆಯಲ್ಲ ಎಂದು ಭಾವ ಶಹ್ಯಾದ್ ಖಾನ್ ಹೇಳಿದರು. ನಾಲ್ಕು ಮಕ್ಕಳನ್ನು ಹೊಂದಿರುವ ಶರ್ಬಾತ್‌ರ ಗಂಡ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News