ಕೇರಳ ಆನ್‌ಲೈನ್ ಮೀಡಿಯಾ ಅಸೋಸಿಯೇಶನ್: ಕಾಸರಗೋಡು ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ
Update: 2016-10-28 12:28 IST
ಕಾಸರಗೋಡು, ಅ.28: ಕೇರಳ ಆನ್‌ಲೈನ್ ಮೀಡಿಯಾ ಅಸೋಸಿಯೇಶನ್‌ನ ಕಾಸರಗೋಡು ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ನೂತನ ಸಮಿತಿಯ ಅಧ್ಯಕ್ಷರಾಗಿ ಇ-ವಿಷನ್‌ನ ರಫೀಕ್ ಕೇಳೋಟ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ನಜೀಬ್ ಚೆಮ್ಮನಾಡ್(ಮೀಡಿಯಾ ಸಿಟಿ), ಕೋಶಾಧಿಕಾರಿಯಾಗಿ ಆರಿಫ್ ಮಚ್ಚಂಪಾಡಿ(ಮೀಡಿಯಾ ನೈನ್), ಉಪಾಧ್ಯಕ್ಷರಾಗಿ ಹಾರೂನ್ ಚಿತ್ತಾರಿ(ಮೀಡಿಯಾ ಪ್ಲಸ್), ಇಸ್ಮಾಯೀಲ್ ಕೋಳಿಯಡ್ಕಂ (ಬಿಗ್ 14), ಜೊತೆ ಕಾರ್ಯದರ್ಶಿಯಾಗಿ ಹರೀಶ್ ಪಂದಕ್ಕಲ್(ಏಶ್ಯಾನೆಟ್ ಕೇಬಲ್ ವಿಷನ್), ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಂ.ಜಿ.ರಹೀಂ(ತುಳುನಾಡು ನ್ಯೂಸ್), ಶರೀಫ್ ಏರೋಳ್, ಅನಸ್ ಕಂಡತ್ತಿಲ್ , ಅನ್ವರ್ ಕೋಳಿಯಡ್ಕಂ, ಅನ್ವರ್ ಚಿತ್ತಾರಿ, ಅಖಿಲೇಶ್ ನಗುಮುಗಂ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ