‘ದಾರ್ಮಿಕ ಮುಖಂಡರ ವಿರುದ್ಧ ಯುಎಪಿಎ’ ಬಗ್ಗೆ ತನಿಖೆ: ಪಿಣರಾಯಿ
Update: 2016-10-28 14:05 IST
ತಿರುವನಂತಪುರಂ,ಅ. 28: ಧಾರ್ಮಿಕ ಭಾಷಣಕಾರರ ವಿರುದ್ಧ ಯಎಪಿಎ ಪ್ರಕಾರ ಕೇಸು ದಾಖಲಿಸಿರುವುದನ್ನು ತನಿಖೆ ನಡೆಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ ಎಂದು ವರದಿಯಾಗಿದೆ. ಯುಎಪಿಎ ದಾಖಲಿಸುವುದು ಸರಕಾರ ನೀತಿಯಲ್ಲ ಎಂದು ಮುಖ್ಯಮಂತ್ರಿ ಪ್ರತಿಪಕ್ಷ ಉಪನಾಯಕ ಪಿ.ಕೆ. ಕುಂಞಾಲಿಕುಟ್ಟಿ ಎತ್ತಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಈ ಹಿಂದೆ ಧಾರ್ಮಿಕವಿದ್ವೇಷದ ಭಾಷಣ ನೀಡಿದ್ದಾರೆಂದು ಆರೋಪಿ ಸಲಫಿವಿಭಾಗದ ಭಾಷಣಕರ್ತ ಶಂಸುದ್ದೀನ್ ಪಾಲತ್ ವಿರುದ್ಧ ಯುಎಪಿಎ ಕಾನೂನು ಪ್ರಕಾರ ಕೇಸು ದಾಖಲಿಸಲಾಗಿದೆ.ಧಾರ್ಮಿಕಸ್ಪರ್ಧೆ ಉಂಟಾಗುವ ರೀತಿಯಲ್ಲಿ ಭಾಷಣ ನೀಡಿದ ಸಂಘಪರಿವಾರದ ಪ್ರಚಾರಕಿ ಕೆ.ಪಿ. ಶಶಿಕಲಾ ವಿರುದ್ಧ ಮತ್ತು ಗೋಪಾಲಕೃಷ್ಣನ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದ್ದರೂ ಯುಎಪಿಎ ಹೇರಿಲ್ಲ. ಈ ತಾರತಮ್ಯದಿಂದಾಗಿ ವಿವಾದಕ್ಕೆ ಸೃಷ್ಟಿಯಾಗಿತ್ತು ಎಂದು ವರದಿ ತಿಳಿಸಿದೆ.