ಬೀದಿ ನಾಯಿ ಸಮಸ್ಯೆ: ಮೇನಕಾರನ್ನು ತೀಕ್ಷ್ಣವಾಗಿ ಟೀಕಿಸಿದ ಕೇರಳಬಿಜೆಪಿ ನಾಯಕ

Update: 2016-10-28 08:53 GMT

ತಿರುವನಂತಪುರಂ, ಅ. 28: ಬೀದಿನಾಯಿ ಸಮಸ್ಯೆಗೆ ಸಂಬಂಧಿಸಿ ಕೇಂದ್ರ ಸಚಿವೆ ಮೇನಕಾ ಗಾಂಧಿಯವರನ್ನು ಬಿಜೆಪಿ ನಾಯಕ ವಿ. ಮುರಳೀಧರನ್ ಒರಟಾಗಿ ಟೀಕಿಸಿದ್ದಾರೆಂದು ವರದಿಯಾಗಿದೆ. ಬೀದಿನಾಯಿಗಳನ್ನು ಕೊಲ್ಲುವವರ ವಿರುದ್ಧ ಕಾಪ್ಪ ಕಾನೂನು ಅಡಿಯಲ್ಲಿ ಕ್ರಮಜರಗಿಸಬೇಕೆಂದು ಮೇನಕಾ ಹೇಳಿರುವುದು ಖಂಡನೀಯವೆಂದು ವಿ.ಮುರಳೀಧರನ್ ಹೇಳಿದ್ದಾರೆ. ಇಂತಹ ಹೇಳಿಕೆಗಳು ನರೇಂದ್ರ ಮೋದಿ ಸರಕಾರದ ವರ್ಚಸ್ಸನ್ನು ಕುಗ್ಗಿಸುತ್ತದೆ. ಕೇರಳದ ಜನರನ್ನು ಬಿಜೆಪಿಯಿಂದ ದೂರಾಗುವಂತೆ ಮಾಡಲು ಮಾತ್ರವೇ ಮೇನಕಾರ ಹೇಳಿಕೆ ಸಹಕಾರಿ ಎಂದು ಅವರು ಆಕ್ರೋಶಿಸಿದ್ದಾರೆ.

 ಈ ಕುರಿತು ಮುರಳೀಧರನ್ ಮೇನಕಾಗಾಂಧಿಗೆ ಪತ್ರಬರೆದಿದ್ದು, ಕೇರಳದಲ್ಲಿ ಬೀದಿನಾಯಿಗಳ ಹಾವಳಿ,ಅವುಗಳು ಮನುಷ್ಯರ ಮೇಲೆ ನಡೆಸುತ್ತಿರುವ ದಾಳಿಯಿಂದ ಜನರು ನೊಂದಿರುವಾಗ ಬೀದಿನಾಯಿಗಳನ್ನು ಸ್ವರಕ್ಷಣೆಗಾಗಿ ಕೊಲ್ಲುವವರ ವಿರುದ್ಧ ಭೀಕರ ಅಪರಾಧಿಗಳ ವಿರುದ್ಧ ಹೇರು ಕಾಪ್ಪ ಕಾನೂನು ಪ್ರಕಾರ ಕೇಸು ದಾಖಲಿಸಬೇಕೆಂದು ನೀವು ಹೇಳಿರುವುದು ಖಂಡನೀಯ. ಇಂತಹ ಹೇಳಿಕೆಗಳು ನೀವು ಕೂಡಾ ಇರುವ ಕೇಂದ್ರ ಸರಕಾರದ ವರ್ಚಸ್ಸಿಗೆ ಹಾನಿಯುಂಟುಮಾಡುವಂತಹದ್ದಾಗಿದೆ. ಕೇರಳದ ಜನರನ್ನುಬಿಜೆಪಿಯಿಂದ ದೂರವಾಗಲು ನಿಮಿತ್ತವಾಗಬಹುದಾಗಿದೆ ಎಂದು ಪತ್ರದಲ್ಲಿ ವಿ.ಮುರಳೀಧರನ್ ವಿವರಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News