ಸೌತ್ ಇಂಡಿಯನ್ ಸ್ಕೂಲ್ ಲೆವೆಲ್ ಕರಾಟೆ ಚಾಂಪಿಯನ್‌ಶಿಪ್: ವಿಕಾಸ್‌ಗೆ ಚಿನ್ನ
Update: 2016-10-28 15:27 IST
ಮಂಗಳೂರು, ಅ.28: ಕೇರಳದ ಪಾಲಕ್ಕಾಡ್‌ನಲ್ಲಿ ಇತ್ತೀಚೆಗೆ ನಡೆದ ಸೌತ್ ಇಂಡಿಯನ್ ಸ್ಕೂಲ್ ಲೆವೆಲ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ವಿಕಾಸ್ 25ರಿಂದ 30 ಕೆ.ಜಿ. ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದಾರೆ.
ಇವರು ಜಪಾನ್ ಶೋಟೋಕಾನ್ ಕರಾಟೆ ಅಸೋಸಿಯೇಶನ್ ಇಂಡಿಯಾದ ಮಾನ್ಯತೆ ಪಡೆದ ಇನ್‌ಸ್ಟಿಟ್ಯೂಟ್ ಆ್ ಕರಾಟೆ ಆ್ಯಂಡ್ ಮಾರ್ಷಿಯಲ್ ಆರ್ಟ್ಸ್‌ನ ವಿದ್ಯಾರ್ಥಿಯಾಗಿದ್ದು, ಸಂಸ್ಥೆಯ ಮುಖ್ಯ ಶಿಕ್ಷಕ ನಿತಿನ್ ಎನ್.ಸುವರ್ಣ ಮತ್ತು ಶಿವಪ್ರಸಾದ್‌ರಿಂದ ತರಬೇತಿ ಪಡೆದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.