×
Ad

ಧಾರ್ಮಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರ ಅಳವಡಿಕೆಗೆ ಪೊಲೀಸ್ ಇಲಾಖೆ ಸೂಚನೆ

Update: 2016-10-28 16:11 IST

ಭಟ್ಕಳ, ಅ.28: ಸಿಸಿಟಿವಿ ಅಳವಡಿಕೆಯಿಂದಾಗಿ ತಾಲೂಕಿನಲ್ಲಿ ಕಳ್ಳತನ ನಿಗ್ರಹದ ಬಗ್ಗೆ ವಿಶ್ವಾಸ ಹೆಚ್ಚಿದ್ದು, ಈ ಕುರಿತು ವಿವಿಧ ಧಾರ್ಮಿಕ ಮುಖಂಡರು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಸಿಪಿಐ ಸುರೇಶ ನಾಯಕ್ ಹೇಳಿದರು.
 ಗುರುವಾರ ಭಟ್ಕಳ ಶಹರ ಠಾಣೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ಅಂಗಡಿ, ಉದ್ದಿಮೆದಾರರು ಮುಂಜಾಗ್ರತಾ ಕ್ರಮವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಿಕೊಳ್ಳುವುದು ಉತ್ತಮ. ಭಟ್ಕಳದಲ್ಲಿ ದಿನದಿಂದ ದಿನಕ್ಕೆ ದ್ವಿಚಕ್ರ ವಾಹನಗಳ ಓಡಾಟ ಮಿತಿ ಮೀರಿ ಏರಿಕೆಯನ್ನು ಕಾಣುತ್ತಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆಯನ್ನು ವಹಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರೆಯಿಸಿಕೊಂಡು ನಿಯಮ ಬಾಹಿರ ಓಡಾಟಕ್ಕೆ ತಡೆಯೊಡ್ಡಲಾಗುವುದು ಎಂದರು.
ಎಸೈ ಕುಡಗುಂಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News