ನ.7- 12: ಎ.ಜೆ.ಆಸ್ಪತ್ರೆ ವತಿಯಿಂದ ಪಾರ್ಶ್ವವಾಯು ತಪಾಸಣಾ ಶಿಬಿರ

Update: 2016-10-28 11:49 GMT

ಮಂಗಳೂರು,ಅ.28: ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ನವೆಂಬರ್ 7ರಿಂದ 12ರವರೆಗೆ ಎ.ಜೆ.ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಪಾರ್ಶ್ವವಾಯು ಸಮಸ್ಯೆಗೆ ತುತ್ತಾಗಬಹುದಾದ ರೋಗಿಗಳಿಗೆ ಸಮಗ್ರ ಪಾರ್ಶ್ವ ವಾಯು ತಪಾಸಣೆಯನ್ನು ರಿಯಾಯಿತಿ ದರದಲ್ಲಿ ನಡೆಸಲಾಗುವುದು ಎಂದು ನರರೋಗ ತಜ್ಞ ಡಾ.ಸುರೇಶ್ ಬಿ.ವಿ. ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ರಿಯಾಯಿತಿ ದರದ ಪ್ಯಾಕೇಜ್‌ನಲ್ಲಿ ಸಿ.ಬಿ.ಸಿ,ಎಫ್.ಬಿ.ಎಸ್, ಸಿರಮ್ ಕ್ರಿಯೇಟಿವ್, ಲಿಪಿಡ್ ಪ್ರೊಫೈಲ್, ಕ್ಯಾರೋಟಿಡ್ ಡೋಪ್ಲರ್ ಸ್ಲಾಡಿ, ಇಸಿಜಿ, ಸಿಟಿ, ಹೆಡ್(ಪ್ಲೇನ್) ಮತ್ತು ನರರೋಗ ತಜ್ಞರಿಂದ ಸಮಾಲೋಚನೆ ಒಳಗೊಂಡಿರುತ್ತದೆ. ತಪಾಸಣೆಯನ್ನು ಮುಂಚಿತವಾಗಿ ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ ಮಾಡಲಾಗುವುದು. ನೋಂದಣಿಗಾಗಿ ದೂ.ಸಂ.:0824-6613165 ಅಥವಾ ಇ-ಮೇಲ್: ajhlounge@gmail.com ಮೂಲಕ ಸಂಪರ್ಕಿಸಬಹುದು ಎಂದು ಡಾ.ಸುರೇಶ್ ತಿಳಿಸಿದ್ದಾರೆ.

ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ಏರಿಕೆ, ಬೊಜ್ಜು, ಹೃದಯದ ರೋಗಗಳು, ಕುಟುಂಬದಲ್ಲಿ ಪಾರ್ಶ್ವವಾಯುವಿನಿಂದ ಬಳಲುತ್ತಿರುವವರಿದ್ದರೆ ಮತ್ತು ಧೂಮಪಾನದಿಂದ ಪಾರ್ಶ್ವವಾಯು ಬರಬಹುದು. ಧೂಮಪಾನವನ್ನು ತಡೆಗಟ್ಟುವುದರಿಂದ ಪಾರ್ಶ್ವವಾಯುವನ್ನು ತಡೆಗಟ್ಟಬಹುದು. ಎರಡು ರೀತಿಯ ಪಾರ್ಶ್ವವಾಯು ಪ್ರಮುಖವಾಗಿ ಕಂಡು ಬರುತ್ತದೆ. ಮೆದುಳಿಗೆ ಸರಬರಾಜಾಗುವ ಒಂದು ರಕ್ತನಾಳದಲ್ಲಿ ರಕ್ತ ಹೆಪ್ಪು ಗಟ್ಟಿದಾಗ ಮತ್ತು ಅಪಧಮನಿಯಲ್ಲಿ ಪ್ಲೇಕ್ ಮೂಲಕ ಅಡಚಣೆ ಊಂಟಾದಾಗ ಹಾಗೂ ಮೆದುಳಿನ ಒಂದು ಭಾಗದಲ್ಲಿ ರಕ್ತನಾಳ ಒಡೆದು ಹೋದಾಗ, ದುರ್ಬಲಗೊಂಡಾಗ ಪಾರ್ಶ್ವವಾಯು ಸಂಭವಿಸಬಹುದು. ಪಾಶ್ವ ವಾಯು ಪೀಡಿತ ವ್ಯಕ್ತಿಯನ್ನು ಮೂರರಿಂದ ನಾಲ್ಕೂವರೆ ಗಂಟೆಗಳ ಒಳಗೆ ಚಿಕಿತ್ಸೆಗೆ ಒಳಪಡಿಸುವುದರಿಂದ ಸೂಕ್ತವಾಗಿ ಚಿಕಿತ್ಸೆ ನೀಡಲು ಸಾಧ್ಯ ಎಂದು ಡಾ.ಸುರೇಶ್ ತಿಳಿಸಿದ್ದಾರೆ.

ಪಾರ್ಶ್ವ ವಾಯುಪೀಡಿತ ವ್ಯಕ್ತಿಯ ಬಾಯಿ ಒಂದು ಕಡೆ ವಾಲಿಕೊಂಡಿರುತ್ತದೆ. ದೇಹದ ಅರ್ಧ ಭಾಗ ದುರ್ಬಲಗೊಂಡಿರುತ್ತದೆ. ದೇಹದ ಒಂದು ಬದಿ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವುದು ದೇಹದ ಸಮತೋಲನ ಅಥವಾ ನಡಿಗೆಯಲ್ಲಿ ತೊಂದರೆ, ನೆನಪು ಶಕ್ತಿಯ ನಷ್ಟ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ತ್ವರಿತವಾಗಿ ಚಿಕಿತ್ಸೆ ನೀಡುವುದರರಿಂದ ವ್ಯಕ್ತಿ ಚೇತರಿಸಿಕೊಳ್ಳಬಹುದು ಎಂದು ಡಾ.ಸುರೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎ.ಜೆ.ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News