ವಿದ್ಯುತ್ ಅವ್ಯವಸ್ಥೆ ಖಂಡಿಸಿ ಆಪ್‌ನಿಂದ ಧರಣಿ

Update: 2016-10-28 12:53 GMT

ಸುಳ್ಯ, ಅ.28: ದಕ್ಷಿಣ ಬೀರಮಂಗಲದ ಹದಗೆಟ್ಟ ರಸ್ತೆ ಹಾಗೂ ವಿದ್ಯುತ್ ಅವ್ಯವಸ್ಥೆಯನ್ನು ವಿರೋಧಿಸಿ ಸುಳ್ಯ ವಿಧಾನಸಬಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ, ಸುಳ್ಯ ಬೀರಮಂಗಿಲ ನಾಗರಿಕ ವೇದಿಕೆ, ಅಟೋ ಚಾಲಕ ವೃಂದ ಹಾಗೂ ಜನಸಾಮಾನ್ಯರ ಸಹಭಾಗಿತ್ವದಲ್ಲಿ ಧರಣಿ ನಡೆಯಿತು.

ಆಮ್ ಆದ್ಮಿ ಪಾರ್ಟಿ ವಿಧಾನಸಬಾ ಸಂಚಾಲಕ ಅಶೋಕ್ ಎಡಮಲೆ ಮಾತನಾಡಿ, ಸಂಬಂಧಿಸಿದ ಇಲಾಖೆಗಳು ತಕ್ಷಣ ಕ್ರಮಕೈಗೊಳ್ಳಬೇಕು ಹಾಗೂ ಮಾಹಿತಿ ಹಕ್ಕಿನ ಪ್ರಕಾರದಲ್ಲಿ ಸರಿಯಾದ ಮಾಹಿತಿ ಒದಗಿಸುವುದು ಇಲಾಖೆಗಳ ಕರ್ತವ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಎಪಿ ವಲಯ ಸಂಚಾಲಕ ರಶೀದ್ ಜಟ್ಟಿಪಳ್ಳ, ನಾಗರಿಕ ವೇದಿಕೆಯ ಕಾರ್ಯದರ್ಶಿ ದಾಸಪ್ಪ, ಡಾ.ಸದಾಶಿವರಾವ್, ಡಾಲ್ಫಿ ಸ್ಥಳೀಯ ರಸ್ತೆ ಹಾಗೂ ವಿದ್ಯುತ್ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಅಧಿಕಾರಿಗೆ ಹಾಗೂ ನಗರ ಪಂಚಾಯತ್‌ಗೆ ತೆರಳಿ ಮುಖ್ಯಾಧಿಕಾರಿಗೆ ಮನವಿ ನೀಡಲಾಯಿತು.

ಆಪ್‌ನ ವಲಯ ಸಂಚಾಲಕರಾದ ರಾಮಕೃಷ್ಣ ಬೀರಮಂಗಿಲ, ಕೇಪು ತೊಡಿಕಾನ, ಕಾರ್ಯದರ್ಶಿ ಗಣೇಶ್ ಪ್ರಸಾದ್, ಜೊತೆ ಕಾರ್ಯದರ್ಶಿ ಕೆ.ಎಂ.ಸಂಶುದ್ದೀನ್, ಕೇಶವಪ್ರಭು, ಗಿರಿಯಪ್ಪ, ದೀಪಕ್, ಶಾರಿಕ್ ಮೊಗರ್ಪಣೆ, ಬಾಲಕೃಷ್ಣ ಅಬ್ದುಲ್ಲ, ಜುಬೈರ್, ರಾಬರ್ಟ್, ನವೀನ, ಸಂಶುದ್ದೀನ್, ಖಾದರ್,  ಬಶೀರ್ ಮೊದಲಾದವರು ಧರಣಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News