ಕಲ್ಲಡ್ಕ : ಅ.29ರಂದು ತ್ರಿವರ್ಣ ಸಾಧನ ಸಂಭ್ರಮ

Update: 2016-10-28 13:16 GMT

ವಿಟ್ಲ, ಅ.28: ಕಲ್ಲಡ್ಕದ ತ್ರಿವರ್ಣ ಸಂಗಮದ ಆಶ್ರಯದಲ್ಲಿ ತ್ರಿವರ್ಣ ಸಾಧನ ಸಂಭ್ರಮ ಕಾರ್ಯಕ್ರಮ ಅ.29 ರಂದು ಸಂಜೆ 7ರಿಂದ ಕಲ್ಲಡ್ಕ-ಪೂರ್ಲಿಪ್ಪಾಡಿಯ ರಘುರಾಮ ಶೆಟ್ಟಿ ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಯಲಿದೆ.

 ಕಾರ್ಯಕ್ರಮದಲ್ಲಿ ಪ್ರತಿಭಾವಂತ ಗಾಯಕರು, ಸ್ಯಾಂಡಲ್‌ವುಡ್, ಕೋಸ್ಟಲ್‌ವುಡ್ ಮತ್ತು ಟಿ.ವಿ. ತಾರೆಯರು ಭಾಗವಹಿಸುವರು. ಸೈಕಾಡಲಿಕ್ ಲೈಟ್‌ಗಳು, ಪೈರೋ ಟೆಕ್ನಿಕ್ ಸ್ಪೆಶಲ್ ಎಫೆಕ್ಟ್‌ಗಳು, ಡಿಜಿಟಲ್ ಸೌಂಡ್ ಸಿಸ್ಟಂ, ಅತ್ಯಾಧುನಿಕ ಶೈಲಿಯ ವೇದಿಕೆ, ಆಕರ್ಷಣೀಯ ಸುಡುಮದ್ದು ಪ್ರದರ್ಶನ ನಡೆಯಲಿದೆ.

ತ್ರಿವರ್ಣ ಸಾಧನಾ ಸಂಭ್ರಮದಲ್ಲಿ ಕೃಷಿ, ಕಲೆ, ಯಕ್ಷಗಾನ, ಕಂಬಳ, ಸಿನಿಮಾ, ನಾಟಕ, ಸಾಮಾಜಿಕ ಹವ್ಯಾಸ, ರಾಜಕೀಯ, ಶಿಕ್ಷಣ, ಭೂತಾರಾಧನೆ, ಉದ್ಯಮ ಹಾಗೂ ಕ್ರೀಡಾ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಉಜಿರೆಯ ತ್ರಿಲೋಕ್ ಡ್ಯಾನ್ಸ್ ಇನ್‌ಸ್ಟಿಟ್ಯೂಟ್‌ನಿಂದ ನೃತ್ಯ ಸಂಗಮ, ಓಶಿಯನ್ ಕಿಡ್ಸ್ ಮಂಗಳೂರು ತಂಡದಿಂದ ರಿಯಾಲಿಟಿ ಶೋ, ರಾಜ್‌ಗೋಪಾಲ್ ಮತ್ತು ತಂಡದವರಿಂದ ಸಂಗಮ್ ನೈಟ್ಸ್-2016 ಸಂಗೀತ ಕಾರ್ಯಕ್ರಮ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಪಟುಗಳಿಂದ ದೇಹದಾರ್ಢ್ಯ ಪ್ರದರ್ಶನ, ಮಂಗಳೂರಿನ ಹೆಸರಾಂತ ತಂಡದಿಂದ ಟೈಗರ್ ಡ್ಯಾನ್ಸ್, ಪ್ರಶಸ್ತಿ ವಿಜೇತ ಪ್ರಶಂಸಾ ಕಾಪು ತಂಡದಿಂದ ಬಲೇ ತೆಲಿಪಾಲೆ, ಕೇರಳದ ಪ್ರಸಿದ್ಧ ತಂಡದಿಂದ ಸಿಂಗಾರಿ ಮೇಳ (ಚೆಂಡೆ) ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತ್ರಿವರ್ಣ ಸಂಗಮದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News