×
Ad

ಗೋವಾದ ಮಾಜಿ ಮುಖ್ಯಮಂತ್ರಿ ಶಶಿಕಲಾ ಕಾಕೋಡ್ಕರ್ ನಿಧನ

Update: 2016-10-28 18:49 IST

ಪಣಜಿ,ಅ.28: ಗೋವಾದ ಮೊದಲ ಮತ್ತು ಏಕೈಕ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶಶಿಕಲಾ ಕಾಕೋಡ್ಕರ್(81) ಅವರು ಅಲ್ಪಕಾಲದ ಅಸ್ವಾಸ್ಥದ ಬಳಿಕ ಇಂದು ಬೆಳಿಗ್ಗೆ ಇಲ್ಲಿ ನಿಧನರಾದರು.

ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ(ಎಂಜಿಪಿ)ಯ ಹಿರಿಯ ನಾಯಕಿಯಾಗಿದ್ದ ಅವರು ಗೋವಾದ ಮೊದಲ ಮುಖ್ಯಮಂತ್ರಿಯಾಗಿದ್ದ ತನ್ನ ತಂದೆ ದಯಾನಂದ ಬಾಂದೋಡ್ಕರ್ ಅವರು 1973ರಲ್ಲಿ ನಿಧನರಾದ ಬಳಿಕ ಮುಖ್ಯಮಂತ್ರಿ ಗದ್ದುಗೆಯ ನ್ನೇರಿದ್ದರು. ಎಪ್ರಿಲ್ 1979ರಲ್ಲಿ ಪಕ್ಷವು ವಿಭಜನೆಗೊಳ್ಳುವವರೆಗೂ ಅವರು ಅಧಿಕಾರದ ಲ್ಲಿದ್ದರು.

90ರ ದಶಕದ ಆರಂಭದಲ್ಲಿ ಶಿಕ್ಷಣ ಸಚಿವೆಯಾಗಿದ್ದ ಅವರು ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲೀಷ್‌ನ್ನು ಪಕ್ಕಕ್ಕೆ ತಳ್ಳಿ ಮರಾಠಿಯನ್ನು ಪ್ರಾದೇಶಿಕ ಭಾಷೆಯನ್ನಾಗಿ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯ ರಾಜಕೀಯದಲ್ಲಿ ಇದು ಇಂದಿಗೂ ಬಿಸಿಚರ್ಚೆಯ ವಿಷಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News