ತುಂಬೆ: ಸೆಲೂನ್‌ನೊಳಗೆ ನೇಣು ಬಿಗಿದು ಯುವಕ ಆತ್ಮಹತ್ಯೆ

Update: 2016-10-28 13:21 GMT

ಬಂಟ್ವಾಳ, ಅ. 28: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಂಬೆ ಗ್ರಾಮದ ರಾಮಲಕಟ್ಟೆಯಲ್ಲಿ ನಡೆದಿದೆ.

ಉತ್ತರ ಪ್ರದೇಶ ಮೂಲದ ಮುಹಮ್ಮದ್ ಶಾನು(18) ಆತ್ಮಹತ್ಯೆಗೈದಿರುವ ಯುವಕ.

ಈತ ತುಂಬೆ ಗ್ರಾಮ ಪಂಚಾಯತ್ ಕಚೇರಿ ಸಮೀಪದಲ್ಲಿರುವ ಸೆಲೂನ್ ಒಂದರಲ್ಲಿ ಕೆಲಸಕ್ಕೆಂದು 15 ದಿನಗಳ ಹಿಂದೆ ಇಲ್ಲಿಗೆ ಬಂದಿದ್ದ ಎನ್ನಲಾಗಿದೆ. ಬೆಳಗ್ಗೆ ಸೆಲೂನ್‌ನ ಶಟರ್ ಬಾಗಿಲು ತೆರೆದಿದ್ದ ಆತ 12 ಗಂಟೆಯ ಸುಮಾರಿಗೆ ಅರ್ಧದಷ್ಟು ಶಟರ್ ಹಾಕಿ ಸೆಲೂನ್‌ನ ಒಳಗಡೆ ಇದ್ದ. ಸಂಜೆ ಮೂರು ಗಂಟೆಯ ಸುಮಾರಿಗೆ ಸ್ಥಳೀಯರು ಶಟರ್ ತೆರೆದು ನೋಡಿದಾಗ ಫ್ಯಾನ್‌ಗೆ ಲುಂಗಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದು ಬೆಳಕಿಗೆ ಬಂದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೃತದೇಹವನ್ನು ಬಂಟ್ವಾಳ ಸಮುದಾಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಊರಿಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ, ಮೃತದೇಹವನ್ನು ವಿಮಾನದ ಮೂಲಕ ಉತ್ತರ ಪ್ರದೇಶಕ್ಕೆ ರವಾನಿಸಲು ಹಾಗೂ ಅದಕ್ಕಿರುವ ಕಾನೂನು ಪ್ರಕ್ರಿಯೆಯನ್ನು ಮುಗಿಸಲು ಬೇಕಾದ ಎಲ್ಲ ವ್ಯವಸ್ಥೆಯನ್ನು ತುಂಬೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮುಹಮ್ಮದ್ ವಳವೂರು ಮಾಡಿದರು. ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News