×
Ad

ಚೀನಿ ಉತ್ಪನ್ನಗಳಿಗೆ ಬಹಿಷ್ಕಾರದಿಂದ ದ್ವಿಪಕ್ಷೀಯ ಬಾಂಧವ್ಯಕ್ಕೆ ಹಾನಿ: ಬೀಜಿಂಗ್ ಎಚ್ಚರಿಕೆ

Update: 2016-10-28 20:10 IST

ಹೊಸದಿಲ್ಲಿ,ಅ.28: ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಭಾರತದ ಕೆಲವು ವಲಯಗಳಿಂದ ನೀಡಲಾಗಿರುವ ಕರೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚೀನಾವು ಇಂತಹ ನಡೆಗಳಿಂದ, ಭಾರತದಲ್ಲಿ ಚೀನಿ ಉದ್ಯಮಗಳ ಹೂಡಿಕೆಗೆೆ ಹಾಗೂ ಉಭಯದೇಶಗಳ ದ್ವಿಪಕ್ಷೀಯ ಬಾಂಧವ್ಯಗಳ ಮೇಲೆ ಪ್ರತಿಕೂಲ ಪರಿಣಾಮವುಂಟಾಗಲಿದೆಯೆಂದು ಅದು ಎಚ್ಚರಿಕೆ ನೀಡಿದೆ.

ಈದರೆ ಭಾರತದಲ್ಲಿ ಚೀನಿ ಉತ್ಪನ್ನಗಳ ಬಹಿಷ್ಕಾರದಿಂದ ತನ್ನ ರಫ್ಪಿನ ಮೇಲೆ ದೊಡ್ಡ ಮಟ್ಟದ ಪರಿಣಾಮವಾಗಲಾರದು. ಆದರೆ ಚೀನಿ ಉತ್ಪನ್ನಳಿಗೆ ಬೇರೆ ಯಾವುದೇ ಪರ್ಯಾವಿಲ್ಲದಿರುವುದರಿಂದ, ಭಾರತದ ವ್ಯಾಪಾರಿಗಳು ಹಾಗೂ ಗ್ರಾಹಕರು ಈ ಬಹಿಷ್ಕಾರದಿಂದ ತೀವ್ರವಾಗಿ ಬಾಧಿತರಾಗಲಿದ್ದಾರೆಂದು ಚೀನಾದ ರಾಯಭಾರ ಕಚೇರಿಯು  ಹೇಳಿಕೆಯೊಂದರಲ್ಲಿ ತಿಳಿಸಿದೆ.

ಚೀನಾವು ಜಗತ್ತಿನ ಅತಿ ದೊಡ್ಡ ಸರಕು ವ್ಯಾಪಾರಿ ದೇಶವಾಗಿದ್ದು, 2015ರಲ್ಲಿ ಅದು ಒಟ್ಟು 2276.5 ಶತಕೋಟಿ ಡಾಲರ್ ವೌಲ್ಯದ ರಫ್ತು ವಹಿವಾಟು ನಡೆಸಿತ್ತು. ಭಾರತಕ್ಕೆ ಚೀನಾದ ರಫ್ತು ಪ್ರಮಾಣವು ಅದರ ಒಟ್ಟು ರಫ್ತಿನ ಕೇವಲ ಶೇ.2ರಷ್ಟಾಗಿದೆ. ಇದರಿಂದಾಗಿ ಚೀನಿ ಉತ್ಪನ್ನಳನ್ನು ಬಹಿಷ್ಕರಿಸಿದಲ್ಲಿ ತನ್ನ ರಫ್ತಿನ ಮೇಲೆ ತೀವ್ರ ಪರಿಣಾಮವುಂಟಾಗಲಾರದೆಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News