ಅಕ್ರಮ ಮರಳು ಸಾಗಾಟ: ಕಾರ್ಯಾಚರಣೆ ವೇಳೆ ನದಿಗೆ ಹಾರಿದ ಪಿಕಪ್ ಚಾಲಕ
Update: 2016-10-28 21:11 IST
ಮಂಜೇಶ್ವರ, ಅ.28: ಮರಳನ್ನು ಗೋಣಿಚೀಲಗಳಲ್ಲಿ ತುಂಬಿಸಿ ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು ಪಿಕಪ್ ಒಂದನ್ನು ಶಿರಿಯ ಅಣೆಕಟ್ಟು ಬಳಿ ವಶಪಡಿಸಿಕೊಂಡಿದ್ದಾರೆ. ಈ ವೇಳೆ ಪಿಕಪ್ ಚಾಲಕ ನದಿಗೆ ಹಾರಿ ಪರಾರಿಯಾಗಿದ್ದಾನೆ.
ಶಿರಿಯ ಅಣೆಕಟ್ಟು ಬಳಿ ಗೋಣಿ ಚೀಲಗಳಲ್ಲಿ ತುಂಬಿಸಿದ ಮರಳುಗಳನ್ನು ಸಾಗಿಸಲು ಪಿಕ್‌ಅಪ್‌ನಲ್ಲಿರಿಸಲಾಗಿತ್ತು. ವಿಷಯ ತಿಳಿದು ದಾಳಿ ನಡೆಸಿದ ವಿದ್ಯಾನಗರ ಸಿಐ ಬಾಬು ಪೆರಿಂಜೋತ್ ನೇತೃತ್ವದ ಪೊಲೀಸರು ಮರಳು ವಶಪಡಿಸಿದ್ದಾರೆ. ಪೊಲಿಸರನ್ನು ಕಂಡ ಪಿಕ್‌ಅಪ್ ಚಾಲಕ ಹೊಳೆಗೆ ಹಾರಿ ಪರಾರಿಯಾಗಿದ್ದಾನೆ. ಸುಮಾರು 200 ಗೋಣಿ ಚೀಲಗಳಲ್ಲಿ ಮರಳುಗಳನ್ನು ತುಂಬಿಸಿಡಲಾಗಿತ್ತು. ಅವುಗಳನ್ನು ಪೊಲೀಸರು ಮತ್ತೆ ಹೊಳೆಗೆ ಚೆಲ್ಲಿದರು.
ಬದಿಯಡ್ಕ ಎಸ್ಸೈ ಎ.ದಾಮೋದರನ್, ಸಿಬ್ಬಂದಿಯಾದ ಫಿಲಿಪ್, ಶ್ರೀರಾಜ್, ಮನು, ರತೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.